ಹೊಸಕೋಟೆ: ಆಂಧ್ರದ ತಿರುಪತಿಯಷ್ಟೇ ಪ್ರಸಿದ್ಧವಾದ ಮಾಲೂರಿನ ಚಿಕ್ಕತಿರುಪತಿಯಲ್ಲಿ ಈಗ ಮಹೋತ್ಸವ ಸಂಭ್ರಮ. 9 ದಿನಗಳ ಕಾಲ ಶ್ರೀವೆಂಕಟೇಶ್ವರ ಸ್ವಾಮಿಯ ಉತ್ಸವ ವಿಜೃಂಭಣೆಯಿಂದ ನಡೆಯಲಿದ್ದು, ಚೈತ್ರಮಾಸ ಪುಬ್ಬಾ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ನೆರವೇರಿತು. ಸಾವಿರಾರು ಭಕ್ತರು ತಿಮ್ಮಪ್ಪನ ರಥವನ್ನೆಳೆದು ಸಂಭ್ರಮಿಸಿದರು.
ಮಾಘ ಮಾಸ ಮತ್ತು ಚೈತ್ರಮಾಸಗಳಲ್ಲಿ ರಾಜ್ಯ- ದೇಶದೆಲ್ಲೆಡೆ ದೇವರ ಉತ್ಸವಾದಿ ಜನರ ಸಂತೋಷಕ್ಕೆ ಕಾರಣ ಆಗ್ತವೆ. ಚಿಕ್ಕತಿರುಪತಿಯ ತಿಮ್ಮಪ್ಪನಿಗೆ ಏ. 7ರಂದು ಧ್ವಜಾರೋಹಣ ಮೂಲಕ ಪ್ರಾರಂಭವಾಗುವ ಉತ್ಸವ 9 ದಿನಗಳ ವರೆಗೆ ನಡೆದು ಏ. 16ರಂದು ಮುಕ್ತಾಯವಾಗ್ತವೆ. ಬ್ರಹ್ಮರಥೋತ್ಸವದಂದು ಭಕ್ತರು ವಾಡಿಕೆಯಂತೆ ಹರಕೆಯ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸುತ್ತಾರೆ. ಅನ್ನದಾನವನ್ನೂ ಮಾಡುತ್ತಾರೆ.
ತಿಮ್ಮಪ್ಪನ ಬ್ರಹ್ಮರಥೋತ್ಸವ ಸಂದರ್ಭ ಭಕ್ತರು ದೇವರಿಗೆ ಬಾಳೆಹಣ್ಣು, ಪೂಜೆ ಇತ್ಯಾದಿ ಸೇವಾ ಕೈಂಕರ್ಯದ ಮೂಲಕ ಭಕ್ತಿಯನ್ನು ಸಮರ್ಪಿಸಿದರು. ಈ ವೇಳೆ ಮಳೆಯ ಸಿಂಚನವೂ ಆಗಿ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
PublicNext
14/04/2022 04:08 pm