ಆನೇಕಲ್: ಗುರುಪೂರ್ಣಿಮೆ ಬಂದಿದ್ದು ಭಗವಾನ್ ಬುದ್ಧರಿಂದ , 5 ಜನಕ್ಕೆ ದೀಕ್ಷೆಕೊಟ್ಟ ದಿನ ಅದನ್ನು ತಿರುಚುವ ಕೆಲಸ ಈಗಿನ ಜನ ಮಾಡುತ್ತಿದ್ದಾರೆ, ಮತ್ತೆ ಗೌತಮ್ ಬುದ್ಧ ತಮ್ಮ ಜ್ಞಾನೋದಯ ದಿಂದ ಸರಳ ಮತ್ತು ಜೀವನಕ್ರಮವನ್ನು ಕಂಡುಕೊಂಡಿದ್ದ ದಿನವನ್ನು ಬುದ್ದಪೂರ್ಣಿಮ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ ಆ ದಿನವನ್ನು ಗೌತಮ್ ಬುದ್ಧ ಸ್ಮರಣೆ ಮಾಡುವುದರ ಮೂಲಕ ಬುದ್ಧ ಪೂರ್ಣಿಮೆಯ ಆಚರಣೆ ಮಾಡಲಾಯಿತು ಎಂದು ಪ್ರಗತಿಪರ ಒಕ್ಕೂಟ ಸಂಘದ ಅಧ್ಯಕ್ಷ ರಾವಣ ತಿಳಿಸಿದರು.
ಆನೇಕಲ್ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ತಥಾಗತ ಭಗವಾನ ಗುರು ಪೂರ್ಣಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಇಡೀ ದೇಶಕ್ಕೆ ಶಾಂತಿ ಮತ್ತು ಸರಳ ಜೀವನಕ್ರಮವನ್ನು ಕೊಟ್ಟಿದ್ದು ಭಗವಾನ್ ಬುದ್ದರು , ಅದರೆ ಗುರುಪೂರ್ಣಿಮೆಯನ್ನ ತಂದಿದ್ದು ಬ್ರಹ್ಮ ಶಂಕರಾಚಾರ್ಯರು ಅಂತ ಬೇರೆ ಅರ್ಥದಲ್ಲಿ ಇತಿಹಾಸವನ್ನು ತಿರುಚಿದ್ದಾರೆ ಪ್ರಪಂಚದಲ್ಲೇ ಗುರುವಿಲ್ಲದೆ ಗುರುವಾದರು ಭಗವಾನ್ ಬುದ್ಧರು , ಜ್ಞಾನೋದಯ ಆದ ನಂತರ ತನ್ನ ಐದು ಜನಕ್ಕೆ ದೀಕ್ಷೆ ಕೊಟ್ಟ ಈ ಸಮಾಜಕ್ಕೆ ತ್ಯಾಗ ಮಾಡುವುದರ ಮೂಲಕ ಆ ಆಚರಣೆ ಮಾಡಲಾಗುತಿದೆ.. ಅಲ್ಲದೆ ಪಂಚಶೀಲ ಕೊಟ್ಟು ಮೊಟ್ಟಮೊದಲ ಬಾರಿಗೆ ಬೌದ್ಧಧರ್ಮವನ್ನು ಸ್ಥಾಪನೆ ಮಾಡಿದರು ಪ್ರಪಂಚಾದ್ಯಂತ ಗುರು ಹುಣ್ಣಿಮೆಯನ್ನು ಭಗವಾನ್ ಬುದ್ಧರಿಗೆ ಸಮರ್ಪಣೆ ಮಾಡುತ್ತೇವೆ ಅಂತ ರಾವಣ ತಿಳಿಸಿದರು.
Kshetra Samachara
13/07/2022 07:30 pm