ರಾಜಧಾನಿ ಬೆಂಗ ಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ 513ನೇ ಜಯಂತಿಯನ್ನು ಅದ್ದೂರಿಯಾಗಿ ನಡೆಸಲು ರಾಜ್ಯ ಒಕ್ಕಲಿಗರ ಸಂಘ ತೀರ್ಮಾನಿಸಿದೆ.
ಈ ಕುರಿತು ಪ್ರೆಸ್ ಮೀಟ್ ನಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪ ರೆಡ್ಡಿ ಮಾತನಾಡಿ ಜೂ.27ಕ್ಕೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರವರು ಜಯಂತಿ ಉದ್ಘಾಟನೆ ಮಾಡಲಿದ್ದಾರೆ.
ಬೆಳಗ್ಗೆ 7.30 ಗಂಟೆಯಿಂದ ನಾಲ್ಕು ಗಡಿ ಗೋಪುರಗಳಿಂದ ಜ್ಯೋತಿಗಳೊಂದಿಗೆ ಮೆರವಣಿಗೆ , ಕೆಂಪೇಗೌಡ ನೃತ್ಯ ರೂಪಕ, ಪುತ್ಥಳಿಗೆ ಮಾಲಾರ್ಪಣೆ ಪೂಜೆ, ಜಾನಪದ ಗಾಯನ ಕಾರ್ಯಕ್ರಮ ಜರುಗಲಿದೆ.
ಅಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ, ಹೆಚ್ ಡಿ ಕುಮಾರಸ್ವಾಮಿ, ಡಿ.ವಿ.ಸದಾನಂದ ಗೌಡ, ಡಿ ಕೆ ಶಿವಕುಮಾರ್, ಆರ್ ಅಶೋಕ್, ಡಾ.ಸಿ.ಎನ್.ಅಶ್ವಥ್ ನಾರಾಯಣ್ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ ಎಂದರು.
PublicNext
25/06/2022 04:20 pm