ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಲಾವಿದನ ಕುಂಚದಿಂದ ದೇಶ-ದೇಶಗಳ ನಡುವೆ ಬಾಂಧವ್ಯ ಸೃಷ್ಟಿ

ಚಿತ್ರಕಲಾ ಪರಿಷತ್ ಕೇವಲ ಕಲಾವಿದರ ಕಲಾಕೃತಿಗೆ ಮಾತ್ರ ಮೀಸಲಿಟ್ಟಲ್ಲ. ಬದಲಾಗಿ ದೇಶ-ದೇಶಗಳ ನಡುವಿನ ಬಾಂಧವ್ಯ ಸೃಷ್ಟಿಗೂ ಕಾರಣವಾಗ್ತಿದೆ. ಆ ಕುರಿತಾದ ಸ್ಟೋರಿ ಇಲ್ಲಿದೆ.

ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಕೇವಲ ಮಾತುಗಳಷ್ಟೇ ಮುಖ್ಯವಲ್ಲ. ಮಾತಿಗೂ ಮೀರಿದ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ಇರುವುದು ಕಲೆಯಲ್ಲಿ ಮಾತ್ರ. ಕಲಾವಿದ ಮತ್ತು ಆಸ್ಪಾದಕರ ಮಧ್ಯೆ ಒಂದು ರೀತಿಯ ಸಂಬಂಧ, ಸಂವಾದ ಸಾಧ್ಯವಾಗುತ್ತಾ ಹೋಗುವುದೇ ಈ ಕಲೆಯಲ್ಲಿ.

ಹೌದು.. ಆ್ಯಲ್ಕಮಿ ಸಂಸ್ಥೆಯಿಂದ ದೇಶದ 16 ಕಲಾವಿದರಿಂದ ಆರ್ಟ್ ಫಾರ್ ಅ ಕಾಸ್ ಎಂಬ ವಿಷಯ ಮೂಲಕ ಚಿತ್ರಕಲಾ ಪರಿಷತ್‌ನಲ್ಲಿ ಕಿರು ಚಿತ್ರ ಸಂತೆ ಆರಂಭವಾಗಿದೆ. ನಿನ್ನೆಯಿಂದ 19 ಮೇ‌2022ರಿಂದ 24 ಮಂಗಳವಾರದವರೆಗೆ ಆರ್ಟ್ ಎಕ್ಸಿಬಿಷನ್ ಜರುಗಲಿದೆ. ಅಬ್ ಸ್ಟ್ರಾಕ್, ರಿಯಲಿಸಂ, ಫ್ಲೋರ್ ಚಾಟ್, ಹೀಗೆ ನಾನಾ ಬಗೆಯ ಚಿತ್ರಗಳು ಕಲಾವಿದರ ಕೈಚಳಕದಿಂದ ಹೊರಹೊಮ್ಮಿದೆ.

ಇನ್ನೂ ಕಿರು‌ಚಿತ್ರ ಸಂತೆಯಲ್ಲಿ 120ಕ್ಕೂ ಹೆಚ್ಚು ಚಿತ್ರಗಳಿವೆ. ಶಿಲ್ಪ ಕೂಡಾ ಆಕರ್ಷಣೀಯವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇಂಡೋ-ಜಪಾನ್ ನಡುವಿನ ಬಾಂಧವ್ಯ ವೃದ್ಧಿಗೂ ಈ ಚಿತ್ರಕಲೆಗಳು ಸಹಕಾರಿಯಾಗುತ್ತಿವೆ. ಜಪಾನ್ ಆಹಾರ, ಊಟ ಪದ್ದತಿ, ಅಲ್ಲಿನ ಸಂಸ್ಕೃತಿಗಳ ಬಗ್ಗೆ ಕಲಾವಿದ ತನ್ನ ಕುಂಚದ ಮೂಲಕ ತೆರೆದಿಟ್ಟಿದ್ದಾನೆ.

ಇದೇ ವೇಳೆ ಗ್ರಾಹಕರಿಂದ ಬಂದ ಹಣದಲ್ಲಿ ಯುವ ಬೆಂಗಳೂರು ಪೌಂಡೇಷನ್‌ಗೆ ನೀಡಲಾಗುತ್ತಿದೆ. ಬಡ ಮಕ್ಕಳು ಹಾಗೂ ಮಹಿಳೆಯರ ಉದ್ಯೋಗಕ್ಕಾಗಿ ಹಣ ವಿನಿಯೋಗವಾಗಲಿದೆ.

Edited By :
PublicNext

PublicNext

21/05/2022 06:32 pm

Cinque Terre

42 K

Cinque Terre

0

ಸಂಬಂಧಿತ ಸುದ್ದಿ