ಗಣೇಶ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು, ಎಲ್ಲೆಡೆ ಹಬ್ಬದ ತಯಾರಿ ಜೋರಾಗಿ ನಡೀತಿದೆ. ಗಲ್ಲಿ ಗಲ್ಲಿಗಳಲ್ಲಿ ಗಣೇಶ ಕೂರಿಸಲು ಯುವಕರು ಉತ್ಸುಕರಾಗಿದ್ದಾರೆ. ಈಗಾಗ್ಲೆ ಗಣೇಶ ಕೂರಿಸಲು ಯುವಕರು, ಆಯೋಜಕರು ಪರ್ಮಿಷನ್, ಕಲೆಕ್ಷನ್ ಅಂತ ಬ್ಯುಸಿಯಾಗಿದ್ರೆ ಇತ್ತ ನಗರ ಪೊಲೀಸ್ರು ಕೋಮುಗಲಭೆಯಂತಹ ಅಹಿತರಕ ಘಟನೆ ನಡೆಯದಂತೆ ಹೈ ಅಲರ್ಟ್ ಆಗಿದ್ದಾರೆ..
ಗಣೇಶೋತ್ಸವ ಕುರಿತು ಪ್ರತಿ ಏರಿಯಾ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಎಲ್ಲೆಲ್ಲಿ ಗಣೇಶ ಕೂರಿಸ್ತಾರೆ? ಇದ್ರಲ್ಲಿ ಸೂಕ್ಷ್ಮ ಪ್ರದೇಶಗಳು ಎಷ್ಟು? ಇಲ್ಲಿನ ಆಯೋಜಕರು ಯಾರು ಎನ್ನುವ ಮಾಹಿತಿ ಪಡೆದಿದ್ದಾರೆ. ಇನ್ನೂ ಗಣೇಶ ಕೂರಿಸುವ ವಿಚಾರವಾಗಿ ಪೊಲೀಸರು ಈಗಾಗ್ಲೆ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳ ಜೊತೆಗೆ ಮಾತುಕತೆ ಕೂಡ ನಡೆಸಿದ್ದಾರೆ. ಪೊಲೀಸರ ಅನುಮತಿ ನಂತರವೇ ಬಿಬಿಎಂಪಿ ಅನುಮತಿ ನೀಡಬೇಕು. ಯಾಕಂದ್ರೆ ಒಂದಷ್ಟು ಸೂಕ್ಷ್ಮ ಪ್ರದೇಶದಲ್ಲಿ ಭದ್ರತೆಗೆ ತೊಂದರೆಯಾಗುತ್ತೆ ಎಂದು ಚರ್ಚೆ ನಡೆಸಲಾಗಿದೆ.
ಮುಖ್ಯವಾಗಿ ಗಣೇಶ ಕೂರಿಸೋ ಜಾಗ ಖಾಸಗಿಯವರಿಗೆ ಸೇರಿದ್ದಾ ಅಥವಾ ಬಿಬಿಎಂಪಿ ಜಾಗನಾ ಎಂದು ಗುರುತು ಮಾಡಲಾಗ್ತಿದೆ. ಗಣೇಶ ವಿಸರ್ಜನೆ ದಿನ ಮೆರವಣಿಗೆ ಪ್ಲಾನ್ ಹೇಗಿದೆ? ಗಣೇಶ ಕೂರಿಸೋ ಏರಿಯಾದಲ್ಲಿ ವಿವಾದಗಳು ಏನಾದ್ರು ಇದಿಯಾ, ಎಷ್ಟು ಜನ ಸೇರಬಹುದು? ಸ್ಥಳಾವಕಾಶ ಹೇಗಿದೆ? ಮೈಕ್ ಸೆಟ್, ಆರ್ಕೆಸ್ಟ್ರಾ ಬಳಕೆ ಮಾಡ್ತಾರಾ? ಹೀಗೆ ಹಲವು ಮಾಹಿತಿಗಳನ್ನ ಕಲೆ ಹಾಕಲು ಪೊಲೀಸರು ಮುಂದಾಗಿದ್ದಾರೆ.
ಇನ್ನು ಇದಕ್ಕೂ ಮೊದಲು ಸೂಕ್ಷ್ಮ ಪ್ರದೇಶದಲ್ಲಿ ಗಣೇಶ ಹಬ್ಬ ಆಯೋಜನೆ ಮಾಡೋರ ಜೊತೆ ಚರ್ಚೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಸದ್ಯ ನಗರದ ಯಾವ ಏರಿಯಾದಲ್ಲೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಪೊಲೀಸರು ಪ್ಲಾನ್ ಮಾಡಿದ್ದಾರೆ. ಇತ್ತ ಯಾವುದೇ ವಿಘ್ನವಿಲ್ಲದೆ ಗಣೇಶನ ಹಬ್ಬ ನಡೆದ್ರೆ ಸಾಕಪ್ಪಾ ಅಂತ ಜನ ಹೇಳ್ತಿದ್ದಾರೆ.
PublicNext
22/08/2022 03:28 pm