ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹರ್ ಘರ್ ತಿರಂಗಾ ಅಭಿಯಾನಕ್ಕೆ ಭಾರೀ ಬೆಂಬಲ: 5000 ವಿದ್ಯಾರ್ಥಿಗಳಿಂದ ರಾಷ್ಟ್ರಧ್ವಜ ಮೆರವಣಿಗೆ

ಯಲಹಂಕ: ಆಗಸ್ಟ್ 15ಕ್ಕೆ ನಮಗೆ ಸ್ವಾತಂತ್ರ್ಯ ದೊರೆತು 75ವರ್ಷಗಳಾಗಲಿದೆ. ಈ ಸವಿನೆನಪಿಗಾಗಿ ಕೇಂದ್ರ ಸರ್ಕಾರ ಆಗಸ್ಟ್ 13ರಿಂದ 15ರವರೆಗೆ ಪ್ರತಿ ಮನೆ ಮೇಲೆ ತ್ರಿವರ್ಣ ದ್ವಜ ಹಾರಿಸುವಂತೆ ಸೂಚಿಸಿತ್ತು. ಈ ಹರ್ ಘರ್ ತಿರಂಗಾ ಅಭಿಯಾನಕ್ಕೆ ಯಲಹಂಕದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದೆ. ಇಂದು 5000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರದ್ವಜ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯಲಹಂಕದ ಸರ್ಕಾರಿ ಪ್ರೌಢಶಾಲೆ ಹಾಗೂ ಹತ್ತಾರು ಶಾಲೆಗಳ 5000 ವಿದ್ಯಾರ್ಥಿಗಳು ದೇಶಾಭಿಮಾನದ ಘೋಷಣೆ ಕೂಗಿ 5.ಕಿ.ಮೀ ಪಾದಯಾತ್ರೆ ನಡೆಸಿದರು.

ಯಲಹಂಕದ ತಾಲೂಕು ಕಚೇರಿಯಿಂದ ಹೊರಟ ಪಾದಯಾತ್ರೆ ಪೊಲೀಸ್ ಸ್ಟೇಷನ್ ಸರ್ಕಲ್, ಕೆಂಪೇಗೌಡ ಸರ್ಕಲ್, ಯಲಹಂಕ & ಕೋಗಿಲು ಕ್ರಾಸ್ಗೆ ತೆರಳಿತು. ಮತ್ತೆ ಅಲ್ಲಿಂದ ಹೋಗಿದ್ದ ಮಾರ್ಗದಲ್ಲೇ ವಾಪಸ್ಸಾಗಿ ಮತ್ತೆ ತಾಲೂಕು ಕಚೇರಿ ತಲುಪಿತು. 5000 ವಿದ್ಯಾರ್ಥಿಗಳ ಮೆರವಣಿಗೆಯಲ್ಲಿ ಯಲಹಂಕ ಶಾಸಕ ವಿಶ್ವನಾಥ್, ಯಲಹಂಕ ವಲಯ ಜಂಟಿ ಆಯುಕ್ತೆ ಪೂರ್ಣಿಮಾ, ವಿವಿಧ ಶಾಲೆಗಳ ಶಿಕ್ಷಕರು, ಮೆರವಣಿಗೆ ಉದ್ದಕ್ಕೂ ವಿದ್ಯಾರ್ಥಿಗಳ ರೋಮಾಂಚನಭರಿತ ಘೋಷಣೆ, ವಿದ್ಯಾರ್ಥಿಗಳ ಸಾಲು ಯಲಹಂಕವನ್ನು ಒಂದು ಗಂಟೆಗಳ ಕಾಲ ಮಂತ್ರಮುಗ್ಧಗೊಳಿಸಿತು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..

Edited By : Manjunath H D
Kshetra Samachara

Kshetra Samachara

11/08/2022 06:08 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ