ಆನೇಕಲ್: ದೇಶದೆಲ್ಲೆಡೆ ಇಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ, ನಾಡಿನ ಜನರು ಸಡಗರ ಸಂಭ್ರಮದಿಂದ ಶ್ರೀ ಕೃಷ್ಣಾನ ಸ್ಮರಣೆ ಮಾಡುತ್ತಿದ್ದಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ ಅದರಂತೆ ಆನೇಕಲ್ ತಾಲೂಕಿನ ಪರ್ಲ್ ವ್ಯಾಲ್ಯೂ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಕ್ಕಳೊಂದಿಗೆ ಆಚರಣೆ ಮಾಡಲಾಯಿತು.
ಇನ್ನು ಇಲ್ಲಿನ ಪರ್ಲ್ ವ್ಯಾಲ್ಯೂ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲಾ ಮಕ್ಕಳು ಶ್ರೀ ಕೃಷ್ಣನ ವೇಷ ಭೂಷಣ ಮತ್ತು ರಾಧೆಯ ವೇಷಭೂಷಣ ರಾಮ ಲಕ್ಷ್ಮಣ ವಿಶ್ವಾಮಿತ್ರ ವೇಷಗಳನ್ನು ಧರಿಸಿ ಇಂದು ಶಾಲೆಗೆ ಆಗಮಿಸಿ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Kshetra Samachara
19/08/2022 05:23 pm