ಆನೇಕಲ್ : ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಬ್ಯಾಗಡದೇನಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಪಾಠಶಾಲೆಯಲ್ಲಿ ಕಥೆ ಕೇಳು ಕಂದ ಕಾರ್ಯಕ್ರಮವನ್ನು ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ವೀಣಾ ಕೆ ಮುನಿರೆಡ್ಡಿ ಉದ್ಘಾಟನೆ ಮಾಡಿದರು ದೊಡ್ಡ ಹಾಗಡೆ ಹರೀಶ್ ತಿಲಕ್ ಗೌಡ ಕಸಾಪ ಅಧ್ಯಕ್ಷ ಆದೂರು ಪ್ರಕಾಶ್ ರತ್ನಮ್ಮ ರಾಜಪ್ಪ ಇದ್ದರು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ಬಿಜೆಪಿ ಹಿರಿಯ ಮುಖಂಡರಾದ ಯಂಗಾರೆಡ್ಡಿ ಕಥೆಗಳಿಗೆ ರಾಷ್ಟ್ರ ಕಟ್ಟುವ ಶಕ್ತಿಯಿದೆ ಇದನ್ನ ಎಲ್ಲ ತಾಯಂದಿರು ಬಳಸಿಕೊಂಡು ಸದೃಢ ರಾಷ್ಟ್ರವನ್ನ ಕಟ್ಟುವಲ್ಲಿ ಯೋಚಿಸಬೇಕಾಗಿದೆ ಎಂದು ಹೇಳಿದರು ಇತಿಹಾಸದ ಪುಟಗಳಲ್ಲಿ ಅನೇಕ ಮಹನೀಯರು ತಮ್ಮನ್ನು ದೇಶಕ್ಕೆ ಅರ್ಪಿಸಿಕೊಂಡು ಅಮರರಾಗಿದ್ದಾರೆ ಅಂತವರ ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಆಶಯ ಭಾಷಣವನ್ನು ಆಡಿದ ದೊಡ್ಡ ಹಾಗಡೆ ಹರೀಶ್ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಪ್ರತಿಭಾ ಕಣಜವಾಗಿದೆ ಕ್ರೀಡೆ ನಾಟಕ ಸಂಗೀತ ಸಾಹಿತ್ಯ ಎಲ್ಲವನ್ನು ಕಲಿತ ಮಕ್ಕಳು ಸಮಾಜದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುತ್ತಾರೆ ಎಂದು ತಿಳಿಸಿದರು
Kshetra Samachara
24/08/2022 06:33 pm