ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಡವರಿಗೆ ಶಿಕ್ಷಣವೇ ಅಸ್ತ್ರ : ಹಿರಿಯ ಹೋರಾಟಗಾರ ಮೂರ್ತಿ ಹೇಳಿಕೆ

ಬೆಂಗಳೂರು ದಕ್ಷಿಣ: ಬಡವರಿಗೆ ಶಿಕ್ಷಣ ಅಸ್ತ್ರ ಆಗಬೇಕು. ಓದಿಗೆ ಬಡತನ ಅಡ್ಡಿಯಾಗಬಾರದು ಎಂದು ಎಲೆಕ್ಟ್ರಾನಿಕ್ ಸಿಟಿಯ ಗೋವಿಂದಶೆಟ್ಟಿ ಪಾಳ್ಯ ದ ಹಿರಿಯ ಹೋರಾಟಗಾರರು ಮೂರ್ತಿ ತಿಳಿಸಿದರು.

ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಕೋನಪ್ಪನ ಅಗ್ರಹಾರ ಸರ್ಕಾರಿ ಶಾಲೆಯಲ್ಲಿ ಓದಿ ಒಳ್ಳೆಯ ಅಂಕಗಳ ಪಡೆದ ವಿದ್ಯಾರ್ಥಿಗಳನ್ನ ಗುರ್ತಿಸಿ ಕೊನಪ್ಪನ ಅಗ್ರಹಾರ ದೇವಸ್ಥಾನದ‌ ಬಳಿ ಸನ್ಮಾನ ಮಾಡಿ ಗೌರವಿಸಲಾಯಿತು ಇನ್ನು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿಸ್ಮಯ ಎಂಬ ವಿದ್ಯಾರ್ಥಿನಿ 625 ಕ್ಕೆ 615 ಅಂಕ ಕಳಿಸಿ ಊರಿಗೆ ಕೀರ್ತಿ ‌ತಂದಿದ್ದಾರೆ.. ಹೀಗಾಗಿ ಮುಂದಿನ ಶಿಕ್ಷಣ ಜೀವನಕ್ಕೆ ಒಳ್ಳೆದಾಗಲಿ ಅಂತ ಊರಿನ ಗ್ರಾಮಸ್ಥರು ಅಭಿನಂದಿಸಿದರು.

ವಿಸ್ಮಯ ವಿದ್ಯಾರ್ಥಿನಿ ಮಾತನಾಡಿ ಈ ಕಾರ್ಯಕ್ರಮದಿಂದ ನನಗೆ ಓದುವುದಕ್ಕೆ ಇನ್ನು ಹೆಚ್ಚು ಆಸಕ್ತಿ ಬಂದಿದೆ ನಮಗೆ ಮೂರ್ತಿಯವರು ಇದೇ ರೀತಿ ಪ್ರೋತ್ಸಾಹ ನೀಡಲಿ, ಡಾಕ್ಟರ್ ಅಗುವ ಅಸೆ ಇದೆ ಹಾಗಾಗಿ ಇಲ್ಲಿಂದಲೇ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿಗಳಾದ ವಿಸ್ಮಯ, ಜಯಂತ್, ರಾಧಾ, ಲಕ್ಷ್ಮೀ, ಸೇರಿದಂತೆ ಹಲವರಿಗೆ ಸನ್ಮಾನ ಮಾಡಲಾಯಿತು, ಕಾರ್ಯಕ್ರಮದಲ್ಲಿ ವಿಮೋಚನಾ ನಗರದ ಸದಸ್ಯರು ಮೂರ್ತಿ ಮತ್ತು ಅಪ್ಪಿ, ಸತೀಶ್, ಅಲಿಗೇಶ್, ಮುನಿರಾಜು, ರವಿ, ಅಲ್ಗೇಶ್ ನಾಗರಾಜ್, ದನ್ಪಾಲ್ ಮತ್ತು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Edited By : PublicNext Desk
Kshetra Samachara

Kshetra Samachara

06/06/2022 07:12 pm

Cinque Terre

2.64 K

Cinque Terre

0

ಸಂಬಂಧಿತ ಸುದ್ದಿ