ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೋಜು, ಮಸ್ತಿಗಾಗಿ ಕಳವು, ಆರೋಪಿಗಳ ಬಂಧನ

ಬೆಂಗಳೂರು: ಮೋಜು ಮಸ್ತಿಗಾಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ಕೋಲಾರ ಮೂಲದ ಕಳ್ಳರನ್ನು ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ..

ರಫೀಕ್, ವಿನಯ್ ಬಂಧಿತ ಆರೋಪಿಗಳು.. ಮೋಜು, ಮಸ್ತಿಗಾಗಿ ಮನೆಗಳವು ಹಾಗೂ ಒಂಟಿ ಮಹಿಳೆಯರ ಗುರಿಯಾಗಿಸಿಕೊಂಡು ಮೈ ಮೇಲಿನ ಬಂಗಾರದ ಒಡವೆಗಳನ್ನು ದೋಚಿ ಪರಾರಿಯಾಗುತ್ತಿದ್ದರು.

ಇನ್ನೂ ಆರೋಪಗಳಿಂದ 6.25000 {ಆರು ಲಕ್ಷ ಇಪ್ಪತೈದು ಸಾವಿರ} ರೂಪಾಯಿ ಬೆಲೆಬಾಳುವ 102 ಗ್ರಾಂ ತೂಕ ಚಿನ್ನ ಹಾಗೂ ರಾಮಮೂರ್ತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ..

ಆರೋಪಿಗಳ ಬಂಧನದಿಂದ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ಕೆಆರ್ ಪುರ ಪೊಲೀಸರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

08/10/2022 01:10 pm

Cinque Terre

2.98 K

Cinque Terre

0

ಸಂಬಂಧಿತ ಸುದ್ದಿ