ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮನೆಯ ಬೀಗ ಮುರಿದು ಆಭರಣ ದರೋಡೆ, ಆರೋಪಿ ಬಂಧನ

ಮಹದೇವಪುರ : ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ವೈಟ್ ಫೀಲ್ಡ್ ವಿಭಾಗದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಬ್ಬಯ್ಯ ಲೇಔಟ್ ನಲ್ಲಿ ಮನೆಯ ಬೀಗ ಮುರಿದು ಆಭರಣ ಕಳವು ಮಾಡಿದ್ದ ಆರೋಪಿಯನ್ನು ಮಹದೇವಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ..

ರಾಜಾಜಿ ನಗರದ ಚೇತನ್ ಕುಮಾರ್ ಬಂಧಿತ ಆರೋಪಿ.. ಆರೋಪಿ ಮನೆಯ ದರೋಡೆ ಒಂದೇ ಅಲ್ಲದೆ ಈ ಹಿಂದೆ ಟಿನ್ ಫ್ಯಾಕ್ಟರಿ ಬಳಿ ಮಹಿಳೆಯ ಮೇಲಿನ ಚಿನ್ನದ ಸರ ಕಳ್ಳತನ ಮಾಡಿರುವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ..

ಇನ್ನೂ ಆರೋಪಿಯಿಂದ 8 ಲಕ್ಷ ರೂಪಾಯಿ ಬೆಲೆಬಾಳುವ 164 ಗ್ರಾಂ ತೂಕದ ಆಭರಣಗಳು ವಶಪಡಿಸಿಕೊಳ್ಳಲಾಗಿದೆ.. ಆರೋಪಿಯ ಬಂಧನದಿಂದ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಮಹದೇವಪುರ ಪೊಲೀಸ್ ಠಾಣಾ ಸಿಬ್ಬಂದಿಗಳ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು..

ವರದಿ- ಬಲರಾಮ್ ವಿ

Edited By : Abhishek Kamoji
Kshetra Samachara

Kshetra Samachara

02/10/2022 03:35 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ