ಶಾಂತಿನಗರ: ಉದ್ಯಮಿ ಮಹಮ್ಮದ್ ಫಹೀಮ್ ಬ್ಯಾಂಕ್ ಚೆಕ್‌ಗಳನ್ನು ದುರ್ಬಳಕೆ ಮಾಡಿಕೊಂಡು ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಲ್ಲದೆ, ಜೀವ ಬೆದರಿಕೆವೊಡ್ಡಿರುವ ಪ್ರಕರಣ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ದಿನಬಳಕೆಯ ವಸ್ತುಗಳ ಹಾಗೂ ಸಿಗರೇಟ್ ವಿತರಕರಾಗಿರುವ ಮುಹಮ್ಮದ್ ಫಹೀಮ್ ತಮ್ಮದೇ ಎಂಎ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಪತ್ನಿ ಫರ್ಹೀನ್ ಫಹಿಮ್ ಹಾಗೂ ಸಹೋದರ ಬಶೀರ್ ಪ್ರಮುಖ ಪಾಲು ಹೊಂದಿದ್ದಾರೆ.
ಆದರೆ, ಬಶೀರ್ ಲೆಕ್ಕಪರಿಶೋಧಕ ನಾಗೇಶ್ ಹಾಗೂ ಮೈಲಾರ್ ಅಸೋಸಿಯೇಟ್ಸ್‌ನ ಮೈಲಾರ್ ಎಂಬಾತನ ಜೊತೆ ಸೇರಿ ಬ್ಯಾಲೆನ್ಸ್ ಶೀಟ್ ತಯಾರಿಸಿ ಫರ್ಹೀನ್ ಫಹಿಮ್ ಅವರ ಬಳಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನಕಲಿ ಸಹಿಗಳನ್ನು ಪಡೆದು ಬ್ಯುಸಿನೆಸ್ ಲಾಸ್ ಎನ್ನುಮತೆ ಬಿಂಬಿಸಿದ್ನಂತೆ. ಇದನ್ನ ಪ್ರಶ್ನಿಸಿದಾಗ ಬಶೀರ್ ಫಹೀಮ್ ಗೆ ಬೆದರಿಕೆ ಹಾಕಿದ್ದಾಗಿ ಆರೋಪಿಸಲಾಗಿದೆ.
ಇದ್ರಿಂದ ಖಿನ್ನತೆಗೆ ಒಳಗಾಗಿದ್ದ ಫಹೀಮ್ ಆತ್ಮಹತ್ಯೆಗೆ ಯತ್ನಿಸಿ ಕೆಲಕಾಲ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಪಡೆದಿದ್ದಾರೆ. ಅದೇ ಸಮಯದಲ್ಲಿ ಬಶೀರ್ ಮತ್ತು ಲೆಕ್ಕಾಪರಿಶೋಧಕ ಮೈಲಾರ್ ಅವರು ಚೆಕ್‌ಗಳನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡು ಬರೋಬ್ಬರಿ 3.60 ಕೋಟಿ ರೂ ಬ್ಯಾಂಕಿನಿಂದ ಪಡೆದು, ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಒತ್ತಡ ಹಾಗೂ ಪ್ರಾಣ ಬೆದರಿಕೆವೊಡ್ಡಿ ಖಾಲಿ ಪತ್ರಗಳಲ್ಲಿ ಸಹಿ ಪಡೆದುಕೊಂಡಿದ್ದಾರಂತೆ. ಜತೆಗೆ, ಬೆಂಗಳೂರಿನಲ್ಲಿ ನೆಲೆಸಬೇಕಾದರೆ 1.50 ಕೋಟಿ ರೂ. ನೀಡಬೇಕು ಎಂದು ಬೆದರಿಸಿದ್ದಾರೆ. ಆರೋಪಿಗಳ ಕೃತ್ಯಕ್ಕೆ ಇಮ್ರಾನ್ ಖಾನ್ ಜಾಗೀರದಾರ್ ಎಂಬವರೂ ಕೈಜೋಡಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಆರೋಪಿಗಳಾದ ಮುಹಮ್ಮದ್ ಬಶೀರ್, ಮೈಲಾರ್, ಇಮ್ರಾನ್ ಖಾನ್ ಜಾಗೀರದಾರ್ ವಿರುದ್ಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
26/09/2022 08:39 pm