ಬ್ಯಾಟರಾಯನಪುರ: ನಗರಲ್ಲಿ ಮತ್ತೆ ಸುಲಿಗೆಕೋರರ ಹಾವಳಿ ಹೆಚ್ಚಾಗಿದೆ. ಅದ್ರಲ್ಲೂ ಟೂ ವೀಲರ್ ನಲ್ಲಿ ಹೋಗುವಾಗ ಡ್ರಾಪ್ ಕೊಡುವ ಮುನ್ನ ಸ್ವಲ್ಪ ಎಚ್ಚರ ಇರ್ಲಿ. ಯಾಕಂದ್ರೆ ಅಯ್ಯೋ ಪಾಪ ಅಂತ ನೀವ್ ಏನಾದ್ರು ಗೊತ್ತು ಗುರಿ ಇಲ್ಲದವರಿಗೆ ಡ್ರಾಪ್ ಕೊಟ್ರೆ ನಿಮ್ಮ ಪ್ರಾಣಕ್ಕೆ ಕುತ್ತು ಬರುತ್ತೆ. ನಿನ್ನೆ ರಾತ್ರಿ ಅಮೃತಹಳ್ಳಿ ಠಾಣ ವ್ಯಾಪ್ತಿ ವ್ಯಕ್ತಿಯೊರ್ವರಿಗೆ ಈ ರೀತಿ ಅನುಭವ ಆಗಿದೆ.
ಶಶಾಂಕ್ ಎಂಬುವವರು ಬೈಕ್‌ನಲ್ಲಿ ಹೋಗುವಾಗ ಡ್ರಾಪ್ ಕೇಳಿದ ವ್ಯಕ್ತಿ, ಡ್ರಾಪ್ ಪಡೆದು ಇಳಿಯುವಾಗ ಕುತ್ತಿಗೆಗೆ ಚಾಕು ಇಟ್ಟು 20 ಗ್ರಾಂ ಚಿನ್ನದ ಸರ ಸುಲಿಗೆ ಮಾಡಿದ್ದಾನೆ. ನಂತ್ರ ಮೊಬೈಲ್ ಕಿತ್ತುಕೊಳ್ಳಲು ವಿಫಲ ಪ್ರಯತ್ನ ನಡೆಸಿದ್ದಾನೆ. ಈ ಕುರಿತು ಅಮೃತಹಳ್ಳಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಪ್ರಕಣ ದಾಖಲಾಗಿದ್ದು, ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಇನ್ನೂ ಮತ್ತೊಂದು ಪ್ರಕರಣದಲ್ಲಿ ಅಕ್ಕ ತಂಗಿಯರಿಗೆ ಲಾಂಗ್ ತೋರಿಸಿ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರೋ ಘಟನೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಊಟ ಮುಗಿಸಿ ವಾಕ್ ಮಾಡ್ತಿದ್ದ ಅಕ್ಕ ತಂಗಿಯರಾದ. ಕಲಾವತಿ ಹಾಗೂ ನಾಗಮಣಿ ಚಿನ್ನದ ಸರ ಕಿತ್ತು ಎಸ್ಕೇಪ್ ಆಗಿದ್ದಾರೆ. ರಾತ್ರಿ9 ಗಂಟೆ ಸುಮಾರಿಗೆ ಆಕ್ಟೀವಾದಲ್ಲಿ ಬಂದಿದ್ದ ಮೂವರಿಂದ ಕೃತ್ಯ ನಡೆದಿದ್ದು ಸುಬ್ರಮಣ್ಯ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Kshetra Samachara
23/09/2022 04:02 pm