ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಸ್ತೆ ಬದಿ ಸಿಮ್ ಪಡೆಯುವ ಮುನ್ನ ಎಚ್ಚರ: ನಿಮ್ಮ ದಾಖಲೆ ಬಳಸಿ ಸಿಮ್ ಮಾರಾಟ ಮಾಡ್ತಾರೆ ಜೋಕೆ

ಬೆಂಗಳೂರು: ರಸ್ತೆ ಬದಿ‌ ನಿಂತು ಸಿಮ್ ಮಾರೋರ ಹತ್ರ ಸಿಮ್ ಖರೀದಿ ಮಾಡೋ ಮುನ್ನೋ ಸ್ವಲ್ಪ ಎಚ್ಚರ ವಹಿಸಿ. ನಿಮ್ಮ ದಾಖಲೆ ಬಳಸಿ ಬೇರೆಯವರಿಗೆ ಸಿಮ್ ಮಾರಾಟ ಮಾಡ್ತಾರೆ. ಅನಧಿಕೃತವಾಗಿ ಆ್ಯಕ್ಟಿವೇಟೆಡ್ ಸಿಮ್ ಕಾರ್ಡುಗಳನ್ನ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನ ಸಿಸಿಬಿಯ ವಿಶೇಷ ವಿಚಾರಣಾ ದಳದ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಮೂಲದ ಮಲ್ಲಿಕಾರ್ಜುನ್ ಬಂಧಿತ ಆರೋಪಿಯಾಗಿದ್ದು,ಜಿಯೋ ಸಿಮ್ ಕಾರ್ಡುಗಳನ್ನ ಮಾರಾಟ ಮಾಡುತ್ತಿದ್ದ ಆರೋಪಿ ತನ್ನ ಬಳಿ ನಂಬರ್ ಪೋರ್ಟ್ ಮಾಡಿಸಲು ಬರುತ್ತಿದ್ದವರ ದಾಖಲೆಗಳನ್ನ ಮೊಬೈಲ್ ಫೋನ್‌ನಲ್ಲಿ‌ ಫೋಟೋ ಕ್ಲಿಕ್ಕಿಸಿಕೊಂಡು ಅದೇ ದಾಖಲೆಗಳಿಂದ ಅನಧಿಕೃತವಾಗಿ ಇತರೆ ಸಿಮ್ ಕಾರ್ಡುಗಳನ್ನ ಆ್ಯಕ್ಟಿವೇಟ್ ಮಾಡುತ್ತಿದ್ದ. ಬಳಿಕ ಅವುಗಳನ್ನ ಹೆಚ್ಚು ಬೆಲೆಗೆ ಇತರರಿಗೆ ಮಾರಾಟ ಮಾಡುತ್ತಿದ್ದ. ದಾಖಲೆಗಳು ಕೊಡದೆ ಇರೋರಿಂದ ಪ್ರತಿ ಸಿಮ್ ಕಾರ್ಡಿಗೆ ಒಂದು ಸಾವಿರದಿಂದ ಒಂದೂವರೆ ಸಾವಿರ ರೂ ಹಣ ಪಡೆಯುತ್ತಿದ್ದ.

ಸದ್ಯ ಆರೋಪಿಯನ್ನ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತನಿಂದ ನೂರಕ್ಕು ಹೆಚ್ಚು ಸಿಮ್ ಕಾರ್ಡುಗಳನ್ನ ವಶಕ್ಕೆ ಪಡೆದಿದ್ದಾರೆ.ಘಟನೆ ಸಂಬಂದ ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ‌ರೀತಿ ಸಿಮ್‌ಪಡೆದವರು ಯಾವೂದಾದ್ರು ಅಪರಾಧ ಕೃತ್ಯಗಳಿಗೆ ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Edited By : Nagaraj Tulugeri
PublicNext

PublicNext

09/09/2022 02:29 pm

Cinque Terre

17.51 K

Cinque Terre

0

ಸಂಬಂಧಿತ ಸುದ್ದಿ