ಆನೇಕಲ್ : ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹಣವನ್ನು ವಂಚನೆ ಮಾಡಿದ್ದಾರೆ ಅಂತ ಆರೋಪದ ಹಿನ್ನೆಲೆಯಲ್ಲಿ ಗಣೇಶ್ ಸಿಂಗ್ ಎಂಬ ವ್ಯಕ್ತಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.ಇನ್ನು ಈ ಯೋಜನೆಯ ಪ್ರಮುಖ ಉದ್ದೇಶ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಹೆದ್ದಾರಿಗಳನ್ನು ಸದುಉದ್ದೇಶ ಆಗಿದ್ದು ಆದರೆ ಇದರ ಶ್ರೀನಿಧಿ ಕಂಸ್ಟ್ರಕ್ಷನ್ ಸಂಸ್ಥೆಯ ಗುತ್ತಿಗೆದಾರ ಪ್ರಕಾಶ್ ರೆಡ್ಡಿ ನೆರಳೂರು ಜಿಲ್ಲಾ ಪಂಚಾಯಿತಿಯ ಸದಸ್ಯ ನಾಗೇಶ್ ರೆಡ್ಡಿ ಯೋಜನೆ ಪ್ರಾಧಿಕಾರದ ನಿರ್ದೇಶಕ ಎಸ್ ಆರ್ ಟಿ ಅಶೋಕ್ ರೆಡ್ಡಿ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಕೆ ಮಾಡಿದ್ದಾರೆ.
ಇನ್ನು ಚಂದಾಪುರದಿಂದ ಅಳಿಬೊಮ್ಮಸಂದ್ರ ಜಿಗಳ ಬೆಂಡಿಗಾನಹಳ್ಳಿ ಅತ್ತಿಬೆಲೆ ಮಾರ್ಗವಾಗಿ ರಸ್ತೆ ಮಾಡಲು ಸುಮಾರು 7 ಕೋಟಿ 38 ಲಕ್ಷವನ್ನು ಕೇಂದ್ರ ಸರ್ಕಾರದಿಂದ ರಸ್ತೆ ಮಾಡಲು ಬಿಡುಗಡೆ ಮಾಡಿತು, ಆದರೆ ಬರಿ ಎರಡು ಕೋಟಿ ಹಣವನ್ನು ಕಳಪೆ ಕಾಮಗಾರಿ ಮಾಡಿ 5 ಕೋಟಿಯನ್ನು ಸರ್ಕಾರಕ್ಕೆ ವಂಚನೆ ಮಾಡಿರುವುದಾಗಿ ಆರೋಪ ಕೇಳಿ ಬಂದಿದೆ.
ಹೀಗಾಗಿ ಖುದ್ದಾಗಿ ಲೋಕಾಯುಕ್ತಕ್ಕೆ ಜಾಗೃತಿ ಮತದಾರ ವೇದಿಕೆ ಗಣೇಶ್ ಸಿಂಗ್ ಲೋಕಾಯುಕ್ತಕ್ಕೆ ದೂರು ಸಲಿಕ್ಕೆ ಮಾಡಿದ್ದಾರೆ, ಇನ್ನು ಕಳಪೆ ಕಾಮಗಾರಿ ಮಾಡಿರುವ ಪ್ರಕಾಶ್ ರೆಡ್ಡಿ ನಾಗೇಶ್ ರೆಡ್ಡಿ ಮತ್ತೆ ಅಶೋಕ್ ರೆಡ್ಡಿ ಜಿಲ್ಲಾ ಅಭಿಯಂತರರು ಹಾಗೂ ಸಹಾಯಕ ಅಭಿಯಂತರರು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
Kshetra Samachara
06/09/2022 07:22 pm