ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಹಾಯದ ನೆಪದಲ್ಲಿ ಯುವತಿಗೆ ಮದ್ಯ ಕುಡಿಸಿ ಅತ್ಯಾಚಾರ: ಇಬ್ಬರು ಕಾಮಾಂಧರು ಅರೆಸ್ಟ್

ಬೆಂಗಳೂರು: ಡ್ರಾಪ್ ಕೊಡುವ ನೆಪದಲ್ಲಿ ಯುವತಿಯನ್ನ ಕರೆದೊಯ್ದು ಅತ್ಯಾಚಾರವೆಸಗಿದ ಘಟನೆ ಬೆಂಗಳೂರಿನ ವಿವೇಕ್ ನಗರದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಅಖಿಲೇಶ್ ಹಾಗೂ ದೀಪು ಎಂಬಿಬ್ಬರು ಕಾಮಾಂಧರನ್ನ ಬಂಧಿಸಲಾಗಿದೆ.

ಎರಡು ದಿನದ ಹಿಂದೆ ಈಜಿಪುರದ ತಮ್ಮ ಹೊಸ ಮನೆಯನ್ನ ನೋಡಿಕೊಂಡು ಸಂಜೆ ಐದು ಗಂಟೆಗೆ ಸುಮಾರಿಗೆ ವಾಪಾಸ್ ಬರುವ ಸಂದರ್ಭದಲ್ಲಿ ಇಬ್ಬರು ಯುವಕರು ಯುವತಿಯನ್ನ ಫಾಲೋ ಮಾಡ್ಕೊಂಡು ಬಂದಿದ್ರಂತೆ. ಅವರಿಂದ ತಪ್ಪಿಸಿಕೊಂಡು ಚರ್ಚ್ ಬಳಿ ಬರುತ್ತಿದ್ದಂತೆ ಎರಡು ಟೂವೀಲರ್ ನಲ್ಲಿ ಬಂದ ಅಖಿಲೇಶ್ ಹಾಗೂ ದೀಪು ಯುವತಿಯನ್ನ ನಮ್ಮ ಏರಿಯಾದವರಲ್ವಾ ಡ್ರಾಪ್ ಕೊಡ್ತೀವಿ ಬನ್ನಿ ಎಂದು ಬಲವಂತವಾಗಿ ಕೂರಿಸಿಕೊಂಡ್ರಂತೆ. ಮುಖ ಪರಿಚಯ ಇದ್ದದ್ರಿಂದ ಯುವತಿ ಅಷ್ಟೇನೂ ವಿರೋಧ ವ್ಯಕ್ತಪಡಿಸಿರಲಿಲ್ಲ.

ನಂತರ ಹುಸ್ಕೂರಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಲವಂತವಾಗಿ ಯುವತಿಗೆ ಕುಡಿಸಿ ಅತ್ಯಾಚಾರವೆಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಘಟನೆ ಸಂಬಂಧ ಯುವತಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾಳೆ. ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಸದ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

Edited By : Nagesh Gaonkar
PublicNext

PublicNext

02/09/2022 07:03 pm

Cinque Terre

37.02 K

Cinque Terre

2

ಸಂಬಂಧಿತ ಸುದ್ದಿ