ಬೆಂಗಳೂರು: ರೈಲ್ವೆ ಇಲಾಖೆಯ ನೌಕರ ಅಂತ ಹೇಳಿಕೊಂಡು ನಕಲಿ ಐಡಿ ಕಾರ್ಡ್ ಮಾಡಿಸಿ ರೈಲಿನ ಮೂಲಕಚೇ ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿಯನ್ನ ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಮಹಮದ್ ಅಸ್ವಕ್ ಬಂಧಿತ ಆರೋಪಿಯಾಗಿದ್ದು, ಆರೋಪಿ ಅಸ್ಸಾಮ್‌ನಲ್ಲಿ ಒಂದು ಗದಗದಲ್ಲಿ ಒಂದು ಮದುವೆ ಮಾಡಿಕೊಂಡಿದ್ದ. ಅಸ್ಸಾಮ್‌ನಿಂದ ಬೆಂಗಳೂರಿಗೆ ಗಾಂಜಾ ಸಾಗಾಟ ಮಾಡ್ತಿದ್ದ. ಗಾಂಜಾ ಸಾಗಿಸಲು ರೈಲ್ವೆ ಸಿಬ್ಬಂದಿಯನ್ನ ಬುಕ್ ಮಾಡಿ ಅಸ್ಸಾಮ್‌ನಲ್ಲಿ ರೈಲು ಕ್ಲೀನಿಂಗ್ ಹೋದಾಗ ಗಾಂಜಾ ಪ್ಯಾಕೇಟ್‌ಗಳನ್ನ ಎಸಿ ಕೋಚ್‌ಗಳಲ್ಲಿ ಲೋಡ್ ಮಾಡಿಸಿ ಅಲ್ಲಿಂದ ಬೆಂಗಳೂರಿಗೆ ತರಿಸುತ್ತಿದ್ದ.
ಪುಣೆಯಲ್ಲಿ ರೈಲ್ವೆ ನೌಕರ ಎಂದು ಐಡಿ ಕಾರ್ಡ್ ಮಾಡಿಸಿಕೊಂಡಿದ್ದ ಅಸ್ವಕ್ ಬೆಂಗಳೂರಿಗೆ ರೈಲು ತಲುಪುತ್ತಿದ್ಸಂತೆ ಕ್ಲೀನಿಂಗ್ ಗೆ ಹೋಗುವ ತನಕ ಕಾಯ್ದು ಅಲ್ಲಿ ಗಾಂಜಾ ರಿಸೀವ್ ಮಾಡ್ತಿದ್ದ. ಸದ್ಯ ಅರೋಪಿಗೆ ರೈಲ್ವೆ ಎಂಪ್ಲಾಯಿಗಳ ಜೊತೆಗೆ ನೆಟ್ವರ್ಕ್ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಅಸ್ವಕ್ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ.
Kshetra Samachara
31/08/2022 06:07 pm