ಬೆಂಗಳೂರು: ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಹಿಳಾ ವಿಭಾಗದ ಟಾಪರ್ ಆಗಿದ್ದ ರಚನಾ ಸಿಐಡಿ ಬಲೆಗಿ ಬಿದ್ದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ರಚನಾ ಸದ್ಯ ಸಿಐಡಿ ಕಸ್ಟಡಿಯಲ್ಲಿದ್ದು, ಸಿಐಡಿ ವಿಚಾರಣೆ ವೇಳೆ ತನ್ನ ಕಣ್ಣೀರಿನ ಕಥೆ ಹೇಳಿಕೊಂಡಿದ್ದಾಳೆ. ತನ್ನ ತಾಯಿ ಸ್ಕೂಲ್ ಟೀಚರ್ ಆಗಿದ್ದು, ಹೆಣ್ಣು ಮಗು ಹುಟ್ಟಿತ್ತು ಅನ್ನೊ ಕಾರಣಕ್ಕೆ ತಾನು ಹುಟ್ಟಿದ ಬಳಿಕ ತಂದೆ ನಮ್ಮನ್ನ ಬಿಟ್ಟು ಹೋಗಿದ್ರು. ನಂತ್ರ ತನ್ನನ್ನ ನಮ್ಮ ತಾಯಿ ಗಂಡು ಮಗನ ರೀತಿ ಬೆಳೆಸಿದ್ರು. ತಾನು ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದೆ. ನಂತ್ರ ಎನ್‌ಟಿಪಿಎಸ್ ಥರ್ಮಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡ್ತಿದ್ದೆ.
ಕೆಲಸ ಮಾಡ್ತಿದ್ದಾಗಲೇ ಎರಡು ಬಾರಿ ಪಿಎಸ್‌ಐ ಪರೀಕ್ಷೆ ಬರೆದಿದ್ದೆ. ಈ ವೇಳೆ ಗುರುವ ಬಸವರಾಜ್ ಎಂಬಾತರ ಪರಿಚಯ ಆಗಿತ್ತು. ಆತನ ಜೊತೆಗೆ ನಾನು ಪಿಎಸ್‌ಐ ಪರೀಕ್ಷೆ ಬರೆದಿದ್ದರ ಬಗ್ಗೆ ಹೇಳಿಕೊಂಡಿದ್ದೆ. ಆಗ ಆತ ಎಷ್ಟು ಬರೆದ್ರು ಆಗಲ್ಲ. ತಾನು ಕೆಲಸ ಮಾಡಿಸಿ ಕೊಡುಸ್ತಿನಿ ಮೂವತ್ತೈದು ಲಕ್ಷ ಕೊಡು ಎಂದಿದ್ದ. ಈ ವೇಳೆ ಅಷ್ಟೊಂದು ಹಣ ಇಲ್ಲ ಅಂತ ಮೂವತ್ತು ಲಕ್ಷಕ್ಕೆ ಮಾತು ಕಥೆ ಮಾಡಿದ್ವಿ. ಸಾಲ ಮಾಡಿಯೇ ಹದಿನೈದು ಲಕ್ಷ ಹಣ ನೀಡಿದ್ದೆ. ಬಳಿಕ ಪರೀಕ್ಷೆಯಲ್ಲಿ ಟಾಪ್ ರ‍್ಯಾಂಕ್ ಬಂದಿತ್ತು. ಇದಾದ ಕೆಲ ದಿನಗಳ ನಂತ್ರ ಕಲಬುರಗಿಯಲ್ಲಿ ಪಿಎಸ್‌ಐ ಹಗರಣ ಬೆಳಕಿಗೆ ಬಂದಿತ್ತು. ಈ ವೇಳೆ ಸರಕಾರ ಸಂಪೂರ್ಣ ಪರೀಕ್ಷೆಯನ್ನೆ ರದ್ದು ಮಾಡಿತ್ತು. ನಾವು ಸರ್ಕಾರದ ನಡೆ ವಿರುದ್ದ ಪ್ರತಿಭಟನೆ ಮಾಡಿದ್ವಿ. ಈ ವೇಳೆಯಲ್ಲೂ ಸಹ ಬಸವರಾಜ್ ಸಂಪರ್ಕ ಇತ್ತು. ಆಗ ಬೆಳಕಿಗೆ ಬಂದಿರೋದು ಕಲಬುರಗಿಯಲ್ಲಿ ಅಗಿರೋದು ಬೆಂಗಳೂರಿನಲ್ಲಿ ಏನಿಲ್ಲ ಅಂತ ಹೇಳಿದ್ರು. ಹೀಗಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ.
ನಂತ್ರ ನಮ್ಮ ಮೇಲು ಕೇಸ್ ದಾಖಲಾದಾಗ ಕೇಸ್ ಕ್ವಾಶ್ ಮಾಡಿಸಲು ವಕೀಲರ ಮೂಲಕ ಸಂಪರ್ಕ ಮಾಡಿದ್ದೆ. ಈ ವೇಳೆ ತಾನು ಹೇಳುವವರೆಗು ಯಾರಿಗೂ ಸಿಗಬೇಡಿ ಅಂತ ವಕೀಲರು ತಿಳಿಸಿದ್ದರು. ಇದೇ ಕಾರಣಕ್ಕೆ ತಾನು ಯಾರ ಕೈಗೂ ಸಿಗದಂತೆ ಎಸ್ಕೇಪ್ ಅಗಿದ್ದೆ ಅಂತ ಸಿಐಡಿ ಅಧಿಕಾರಿಗಳ ಮುಂದೆ ರಚನಾ ಕಣ್ಣೀರಾಕಿದ್ದಾರೆ.
PublicNext
31/08/2022 05:56 pm