ದೇವನಹಳ್ಳಿ : ದೇವನಹಳ್ಳಿ ಇಂಟರ್ನ್ಯಾಷನಲ್ ಏರ್ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಕಳ್ಳಸಾಗಾಣೆಗೆ ಯತ್ನಿಸಿದ ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 30ಕ್ಷ 60 ಸಾವಿರ ಬೆಲೆಯ ಚಿನ್ನದ ತಂತಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಆಗಸ್ಟ್ 27ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. DRI ಅಧಿಕಾರಿಗಳು ಸೂಕ್ತ ಮಾಹಿತಿಯನ್ವಯ ಆರೋಪಿಯನ್ನು ತಪಾಸಣೆ ನಡೆಸಿದ್ದಾರೆ. ಆರೋಪಿಯು ಲೆಗ್ಗೇಜ್ ಟ್ರಾಲಿಯಲ್ಲಿ ಬ್ಯಾಗನ್ನು ಸಾಗಿಸುತ್ತಿದ್ದ ವೇಳೆ ಅನುಮಾನಗೊಂಡು ತಪಾಸಣೆ ನಡೆಸಿದಾಗ ಚಿನ್ನದ ತಂತಿ ಪತ್ತೆಯಾಗಿದೆ.
Kshetra Samachara
29/08/2022 11:05 am