ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಕ್ರಮವಾಗಿ ಸಾಗಾಟ ಮಾಡ್ತಿದ್ದ ವಿದೇಶಿ ಸಿಗರೇಟ್‌ ಪ್ಯಾಕ್ಸ್‌ ವಶಕ್ಕೆ

ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಿಸಲಾಗ್ತಿದ್ದ 16ಲಕ್ಷ 38 ಸಾವಿರ ಮೌಲ್ಯದ 84 ಬಾಕ್ಸ್‌ಗಳಲ್ಲಿ ಸಾಗಿಸಾಗ್ತಿದ್ದ 840 ಪ್ಯಾಕ್ಸ್‌ಗಳನ್ನ ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಅಕ್ರಮವಾಗಿ ವಿದೇಶಿ ಸಿಗರೇಟ್‌ಗಳನ್ನ ವಿದೇಶಿ ಪ್ರಜೆ ಬೆಂಗಳೂರಿಗೆ ಸಾಗಾಟ ಮಾಡಲು ಯತ್ನಿಸುತ್ತಿದ್ದ. ಈ ವೇಳೆ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಾನೆ.

ವಿದೇಶಿ ಪ್ರಜೆಯ ಚಲನವಲನದ ಬಗ್ಗೆ ಅನುಮಾನಗೊಂಡ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ವೇಳೆ‌ ವಿದೇಶಿ ಪ್ರಜೆಯ ಅಕ್ರಮ ಸಿಗರೇಟ್ ಪತ್ತೆಯಾಗಿವೆ. ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಿನೇ ದಿನೇ ಅಕ್ರಮ‌ ಕಳ್ಳ ಸಾಗಾಣೆ ಪ್ರಕರಣ ಅಧಿಕವಾಗುತ್ತಿದೆ.

Edited By : Abhishek Kamoji
Kshetra Samachara

Kshetra Samachara

28/08/2022 06:03 pm

Cinque Terre

3.4 K

Cinque Terre

0