ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಲೆಗೆ ಬಿದ್ದ ಗಾಂಜಾ ಪೆಡ್ಲರ್: 10 ಲಕ್ಷ ಮೌಲ್ಯದ ಗಾಂಜಾ ಸೀಜ್ ಮಾಡಿದ ಸಿಸಿಬಿ

ಬೆಂಗಳೂರು: ಗಾಂಜಾ ಸಂಗ್ರಹಿಸಿಕೊಂಡು ಮಾರಾಟ ದಂಧೆಯಲ್ಲಿ ತೊಡಗಿದ್ದ ಪೆಡ್ಲರ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಿಹಾರ ಮೂಲದ ಮನೀಶ್‌ಕುಮಾರ್ ಬಂಧಿತ ಆರೋಪಿಯಾಗಿದ್ದು, ಈತನಿಂದ 10 ಲಕ್ಷ ಬೆಲೆ ಬಾಳುವ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿಕೊಂಡಿದ್ದ ಮೊಬೈಲ್ ಫೋನ್ ಸೀಜ್ ಮಾಡಲಾಗಿದೆ.

ಆರೋಪಿ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಬೇಕರಿ ಮತ್ತು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಓರಿಸ್ಸಾ ರಾಜ್ಯದ ಆತನ ಸಹಚರನಿಂದ ಗಾಂಜಾವನ್ನು ಕಡಿಮೆ ಬೆಲೆಗೆ ಬೆಂಗಳೂರಿಗೆ ತರಿಸಿಕೊಂಡು ಇಲ್ಲಿ ಆತನಿಗೆ ಪರಿಚಯವಿರುವ ಗ್ರಾಹಕರುಗಳಿಗೆ ಅದರಲ್ಲೂ ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ.

Edited By : Nagaraj Tulugeri
Kshetra Samachara

Kshetra Samachara

28/08/2022 11:43 am

Cinque Terre

4.01 K

Cinque Terre

0