ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಟೆಕ್ಕಿಗೆ ಸಿಇಓನಿಂದ ಲೈಂಗಿಕ ದೌರ್ಜನ್ಯ : ಠಾಣೆ ಮೆಟ್ಟಿಲೇರಿದ ಟೆಕ್ಕಿ

ಬೆಂಗಳೂರು: ಖಾಸಗಿ ಕಂಪನಿ ಸಿಇಓ ತನ್ನ ಸಹೋದ್ಯೊಗಿ ಟೆಕ್ಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಪ್ರಣಯ್ ಶ್ರೀವಾಸ್ತವ್ ಎಂಬಾತನ ವಿರುದ್ಧ ನೊಂದ ಸಂತ್ರಸ್ಥೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಸಹೋದ್ಯೋಗಿಯ ಹುಟ್ಟುಹಬ್ಬದ ಆಚರಣೆಗೆಂದು ಸಂತ್ರಸ್ತ ಯುವತಿ ತೆರಳಿದ್ದಳು. ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಯುವತಿಯ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದ ಪ್ರಣಯ್ ತಡರಾತ್ರಿಯಾಗಿದೆ. ಹೀಗಾಗಿ ಬೆಳ್ಳಂದೂರಿನ ಎಸ್ ಜೆ ಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ ನಲ್ಲಿ ಉಳಿದು ಮುಂಜಾನೆ ಹೋಗಿ ಎಂದು ಹೇಳಿದ್ದ.

ಸಿಇಓ ಹೇಳುತ್ತಿದ್ದಾರೆ ಎಂದು ಒಪ್ಪಿದ ಸಂತ್ರಸ್ಥೆ ಗೆಳತಿಯರ ಜೊತೆ ಕೋಣೆಯಲ್ಲಿ ನಿದ್ರೆಗೆ ಜಾರಿದ್ದಳು. ಇದೇ ಸಮಯಕ್ಕೆ ಕಾದು ಕೂತಿದ್ದ ಪ್ರಣಯ್ ಯುವತಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿ ಲೈಗಿಂಕ ದೌರ್ಜನ್ಯ ಎಸಗಿದ್ದಾನೆ. ಘಟನೆ ಬಗ್ಗೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ಮೇಲಾಧಿಕಾರಿಗಳಿಗೆ ದೂರು ನೀಡಿದರು ಕ್ರಮಕೈಗೊಂಡಿಲ್ಲ ಎಂದು ಟೆಕ್ಕಿ ಆರೋಪಿಸಿದ್ದಾಳೆ.

ಹೀಗಾಗಿ ಸಂತ್ರಂಸ್ಥೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಣಯ್ ಶ್ರೀವಾಸ್ತವ್ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಹಿಂದೆಯೂ ಸಹ ಪ್ರಣಯ್ ಹಲವು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.ಸದ್ಯ ಪ್ರಣಯ್ ವಿರುದ್ಧ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

17/08/2022 03:35 pm

Cinque Terre

1.27 K

Cinque Terre

0

ಸಂಬಂಧಿತ ಸುದ್ದಿ