ಬೆಂಗಳೂರು: ಮನೆಯ ಹೊರಗೆ ನಿಲ್ಲಿಸಿದ್ದ ಗಾಡಿಗಳಿಂದ ಬ್ಯಾಟರಿ ಕಳ್ಳತನ ಮಾಡಿರುವ ಪ್ರಕರಣ ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ಬಿಟಿಎಂ ಲೇಔಟ್ 25ನೇ ಮುಖ್ಯ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್ ಗಳ ಬ್ಯಾಟರಿ ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೇ ರೀತಿಯ ಘಟನೆ ಒಂದು ತಿಂಗಳ ಹಿಂದೆ ಇದೇ ಬಿಟಿಎಂ ಲೇಔಟ್‌ನಲ್ಲಿ 35 ರಿಂದ 40 ಗಾಡಿಗಳ ಬ್ಯಾಟರಿ ಕಳ್ಳರು ಕದ್ದಿದ್ದಾರೆ. ಈಗ ಮತ್ತೆ ಈ ಬ್ಯಾಟರಿ ಕಳ್ಳರ ಹಾವಳಿ ಶುರುವಾಗಿದೆ, ಈ ಬಾರಿ 10 ಬೈಕ್‌ಗಳ ಬ್ಯಾಟರಿ ಕದ್ದಿರುವ ಕಳ್ಳರು. ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
16/08/2022 11:11 am