ಬೆಂಗಳೂರು: ತಮಿಳುನಾಡಿನ ಉದ್ಯಮಿ ಬಿಸಿನೆಸ್ ವಿಚಾರ ಮಾತನಾಡಲು ಯುವತಿ (ಟೆಕ್ಕಿ) ಯನ್ನು ಹೊಟೇಲ್ ಗೆ ಕರೆಸಿಕೊಂಡಿದ್ದ. ಅಷ್ಟೇ ಅಲ್ಲದೆ, ಖಾಸಗಿ ಹೊಟೇಲ್ ನಲ್ಲಿ ಯುವತಿಯ ಜೊತೆ ಉಳಿದುಕೊಂಡಿದ್ದ.
ಮೂಲತಃ ತಮಿಳುನಾಡಿನ ಉದ್ಯಮಿ ರಮೇಶ್ ಆಗಸ್ಟ್ 6ರಂದು ಬಿಸಿನೆಸ್ ವಿಚಾರವಾಗಿ ನಗರಕ್ಕೆ ಬಂದಿದ್ದ. ಈ ವೇಳೆ ಯುವತಿಯನ್ನು ಭೇಟಿ ಮಾಡಲೆಂದು ಉದ್ಯಮಿ ಕಬ್ಬನ್ ಪಾರ್ಕ್ ಗೆ ಕರೆಸಿಕೊಂಡಿದ್ದ. ಸ್ವಲ್ಪ ಸಮಯ ಕಾಲ ಕಬ್ಬನ್ ಪಾರ್ಕ್ ನಲ್ಲಿ ಮಾತನಾಡಿ ಊಟಕ್ಕೆ ಅಂತ ಹೋಟೆಲ್ ಗೆ ಉದ್ಯಮಿ ಕರೆದುಕೊಂಡು ಹೋಗಿದ್ದಾನೆ. ನಂತರ ಹೋಟೆಲ್ ನಲ್ಲಿ ಉದ್ಯಮಿಯು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಉದ್ಯಮಿ ರಮೇಶ್ ದೂರದ ಸಂಬಂಧಿ. ಇನ್ನು, ಈ ಘಟನೆಯಿಂದ ಶಾಕ್ ಗೆ ಒಳಗಾಗಿದ್ದ ಯುವತಿ ಮೂರು ದಿನದ ಬಳಿಕ ದೂರು ನೀಡಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸರು ದೂರು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ನಮ್ಮ ಒಂದು ತಂಡ ತಮಿಳುನಾಡಿಗೆ ಭೇಟಿ ನೀಡಿದೆ. ದೂರಿನನ್ವಯ ಎಫ್ ಐಆರ್ ದಾಖಲಿಸಿದ್ದೇವೆ. ಆರೋಪಿಯನ್ನು ಬಂಧಿಸಿದ ನಂತರ ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
PublicNext
12/08/2022 09:14 pm