ಬೆಂಗಳೂರು: ಬೆಂಗಳೂರು ದಕ್ಷಿಣದ ರಾಜ ಪಾಳ್ಯಂ ಲೇಔಟ್ ನಲ್ಲಿ ಮನೆಯ ಕಾಂಪೌಂಡಿನ ಒಳಗೆ ನಿಲ್ಲಿಸಿದ್ದ ಸೈಕಲ್ ಕದ್ದು ಕಳ್ಳ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಲೇಔಟ್ ನಲ್ಲಿ ಕೆಲವು ತಿಂಗಳಿನಿಂದ ಮನೆಯ ಕಾಂಪೌಂಡಿನ ಒಳಗೆ ನಿಲ್ಲಿಸಿದ್ದ ಸೈಕಲ್ ಗಳನ್ನು ಕಳ್ಳರು ಕದಿಯುತ್ತಿದ್ದಾರೆ. ..
ಕಳ್ಳ ಸೈಕಲ್ ಕದಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಇದರ ಆಧಾರದ ಮೇಲೆ ಈಗ ಪೊಲೀಸರು ಕಳ್ಳರನ್ನು ಹುಡುಕುತ್ತಿದ್ದಾರೆ. ರಾಜ ಪಾಳ್ಯ ಲೇಔಟ್ ನಿವಾಸಿಗಳು ಸೈಕಲ್ ಕಳ್ಳರಿಂದ ಬೇಸತ್ತು ಹೋಗಿದ್ದು ಆದಷ್ಟು ಬೇಗ ಕಳ್ಳರನ್ನು ಬಂಧಿಸಬೇಕೆಂದು ಆಗ್ರಹಿಸುತ್ತಿದ್ದಾರೆ.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು
PublicNext
12/08/2022 09:03 pm