ಬೆಂಗಳೂರು: ಆ ಪ್ರದೇಶದ ಜನ ಆಗಷ್ಟೇ ಎದ್ದು ವಾಕಿಂಗ್‌ಗಾಗಿ ಕೆರೆ ಬಳಿ ಹೋಗಿದ್ದರು. ಆದರೆ ಅದೊಂದು ದೃಶ್ಯ ಕಂಡು ಎಲ್ಲರೂ ಶಾಕ್ ಆಗಿದ್ದರು. ಅಲ್ಲಿ ಆಗಿದ್ದಾದರೂ ಏನು..? ಇದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ.
ಗುರುವಾರ ಬೆಳಗ್ಗೆ 6 ಗಂಟೆಗೆ ದಿನನಿತ್ಯದಂತೆ ಏರಿಯಾದ ಜನ ವಾಕಿಂಗ್‌ಗೆ ಹೊರಟಿದ್ದರು. ಆದರೆ ಮಡಿವಾಳ ಕೆರೆ ಬಳಿ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಕೂಡಲೇ ವಾಕಿಂಗ್‌ಗಾಗಿ ಬಂದಿದ್ದ ಜನರು ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಬಂದು ನೋಡಿದಾಗ ಮಹಿಳೆಯ ಮೃತದೇಹ ಕೆರೆಯ ಬದಿಯಲ್ಲಿ ಬಿದ್ದಿದ್ದು, ಮಹಿಳೆಯ ಮೃತದೇಹದ ಮೇಲೆ ಇದ್ದ ಗಾಯಗಳ ಗುರುತು ಕಂಡು ಮಹಿಳೆಯ ಕೊಲೆ ಆಗಿದೆ ಎಂದು ಪೊಲೀಸರಿಗೆ ಕನ್ಫರ್ಮ್ ಆಗಿತ್ತು.
ಬಿಟಿಎಂ ಲೇಔಟ್ ಎರಡನೇ ಹಂತದ ಜನರು ಬುಧವಾರ ಸಂಜೆ ಅಷ್ಟೇ ಈ ಮಹಿಳೆ ಕೆರೆ ಬಳಿ ಓಡಾಡುತ್ತಿದ್ದನ್ನು ಕಂಡಿದ್ದರು. ಆದರೆ ಬೆಳಗಾಗುವಷ್ಟರಲ್ಲಿ ಅದೇ ಮಹಿಳೆ ಶವವಾಗಿ ಪತ್ತೆಯಾಗಿದ್ದಳು. ಆದರೆ ಇಲ್ಲಿಯವರೆಗೂ ಕೊಲೆಯಾಗಿದ್ದ ಮಹಿಳೆಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಈಗ ಪೊಲೀಸರ ತಂಡ ಮಹಿಳೆಯ ಹಂತಕರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಮಹಿಳೆಯ ಕೊಲೆ ಹಿಂದೆ ಈಗ ಹಲವಾರು ಅನುಮಾನಗಳು ಮೂಡಿದ್ದು, ಪೊಲೀಸರು ಹಂತಕರನ್ನು ಹಿಡಿಯಲು ಪ್ರತ್ಯೇಕ ತಂಡ ನೇಮಿಸಿ ಹುಡುಕಾಡುತ್ತಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
11/08/2022 10:37 pm