ಬೆಂಗಳೂರು: ಬೆಂಗಳೂರು ನಗರ ಪೂರ್ವ ವಿಭಾಗದ ಹೆಣ್ಣೂರು, ಬಾಣಸವಾಡಿ, ರಾಮಮೂರ್ತಿನಗರ, ಸಂಪಿಗೇಹಳ್ಳಿ ಪೊಲೀಸ್ ಠಾಣೆಗಳಲ್ಲಿ ಲೀಸ್, ಸಬ್ಲೀಜ್, ಮನೆ ಅಡ್ವಾನ್ಸ್, ಬಾಡಿಗೆಗಳ ಹೆಸರಲ್ಲಿ ಕೋಟ್ಯಂತರ ವಂಚನೆಯ ಹತ್ತಾರು ಪ್ರಕರಣ ದಾಖಲಾಗಿವೆ.
ಮನೋಹರ್ ನಿನಾವತ್- ಶೀತಲ್ ನಿನಾವತ್ ಎಂಬ ಫ್ರಾಡ್ ದಂಪತಿ 60ರಿಂದ 80 ಜನರ ಬಳಿ ಬರೋಬ್ವರಿ 15ರಿಂದ 18 ಕೋಟಿವರೆಗೂ ಅಡ್ವಾನ್ಸ್ ಅಮೌಂಟ್ ಪಡೆದು ಎಸ್ಕೇಪ್ ಆಗಿದ್ದಾರೆ.
ಮೋಸ ಹೋದವರ ದೂರಿನನ್ವಯ ಬಾಣಸವಾಡಿ ಪೊಲೀಸರು ನಿನಾವತ್ ದಂಪತಿನ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಆದರೆ, ಬೇಲ್ ಮೇಲೆ ಆಚೆ ಬಂದ ದಂಪತಿ ಎಸ್ಕೇಪ್ ಆಗಿದ್ದಾರೆ.
ಇತ್ತೀಚೆಗೆ ಹೆಣ್ಣೂರು ಸುತ್ತಮುತ್ತ ಜೋರು ಮಳೆಯಾಗಿ ರಾಜಕಾಲುವೆಯ ನೀರು ಮನೆಗಳಿಗೆ ನುಗ್ಗಿ, ಮನೆ ಬಿರುಕು ಬಿಟ್ಟು, ಯಾವ ಕ್ಷಣದಲ್ಲಾದರೂ ಮನೆ ಬಿದ್ದೋಗಬಹುದು.
ಲೀಸ್ ಪಡೆದ ಹತ್ತಾರು ಮನೆಗಳ ಸ್ಥಿತಿ ಈ ರೀತಿಯಾಗಿದ್ದು, ಇತ್ತ ಮನೆಯೂ ಚೆನ್ನಾಗಿಲ್ಲ, ಅತ್ತ ಹಣವೂ ಇಲ್ಲದೆ ಲೀಸ್ ಹೋಲ್ಡರ್ಸ್ ಬೀದಿಗೆ ಬಂದಿದ್ದಾರೆ.
ಬಾಡಿಗೆ ಬರುವವರೆಗೂ ಸುಮ್ಮನಿದ್ದ ಮನೆ ಮಾಲೀಕರು ಮೀಡಿಯೇಟರ್ ನಿನಾವತ್ ಕಡೆಯಿಂದ ಹಣ ನಿಂತ ಕೂಡಲೇ, ಲೀಸ್ ಹೋಲ್ಡರ್ಸ್ ಗೆ ಕಾಟ ಕೊಡಲು ಶುರು ಮಾಡಿದ್ದಾರೆ. ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ.
ಈ ಪೀಕಲಾಟದಿಂದ ನೊಂದವರು ಪೊಲೀಸರ ಮೊರೆ ಹೋಗಿದ್ದಾರೆ. ಆದರೆ, ಪೊಲೀಸರು ಇದು ಸಿವಿಲ್ ಮ್ಯಾಟರ್ ಆದ್ದರಿಂದ ಸಮಸ್ಯೆಯನ್ನು ಕೋರ್ಟ್‌ನಲ್ಲಿ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿದ್ದಾರೆ.
ಮಾಲೀಕರು ಒಂದು- ಎರಡು ವರ್ಷ ಬಾಡಿಗೆ ಇಲ್ಲದ ಮನೆಗಳನ್ನು ಈ ರೀತಿ ಬ್ರೋಕರ್ ಕಂಪನಿಗಳಿಗೆ ನೀಡಿ ಪರ್ಸಂಟೇಜ್ ಆಸೆಗೆ ಬಿದ್ದು ಕನ್ಸರ್ನ್ ಲೇಟರ್ ಆಧಾರದ ಮೇಲೆ ಲೀಸ್ ಗೆ ನೀಡಿದ್ದರು. ಆದರೆ, ಕೋಟ್ಯಂತರ ರೂ. ಪಡೆದ ನಿನಾವತ್ ದಂಪತಿ ಎಸ್ಕೇಪ್ ಆಗಿರುವುದು ಪೊಲೀಸರು ಮತ್ತು ಲೀಸ್ ಗೆ ಪಡೆದವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
PublicNext
11/08/2022 08:12 am