ಬೆಂಗಳೂರು: ಡ್ರಗ್ಸ್ ಸೇವಿಸಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತೆಲಂಗಾಣದ ಪ್ರತಿಷ್ಟಿತ ಬಟ್ಟೆ ಕಂಪನಿ ವೈಟ್ ಅಪರೆಲ್ಸ್ ಮಾಲೀಕರ ಮಗಳನ್ನ ಸಂದೀಪ್ ಎಂಬಾತನಿಗೆ 2021ರ ಜನವರಿಯಲ್ಲಿ ವಿವಾಹ ಮಾಡಿಕೊಡಲಾಗಿತ್ತು.
ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಮದ್ವೆ ಮಾಡಿದ್ದ ಆಗರ್ಭ ಶ್ರೀಮಂತರು ಮದ್ವೆಗೆ 200 ಕೆಜಿ ಬೆಳ್ಳಿ 4 ಕೆ.ಜಿ ಚಿನ್ನ, 55ಲಕ್ಷದ ಮಿನಿಕೂಪರ್ ಕಾರು ಜೊತೆಗೆ 50 ಲಕ್ಷ ಕ್ಯಾಶ್ ಕೂಡ ಕೊಟ್ಟು ಸಂದೀಪ್‌ಗೆ ಮದುವೆ ಮಾಡಲಾಗಿತ್ತು. ಹೆಚ್ಚು ಕಮ್ಮಿ ಆರು ಕೋಟಿಯಷ್ಟು ಖರ್ಚು ಮಾಡಿ ಅದ್ಧೂರಿಯಾಗಿ ಮದ್ವೆ ಮಾಡಿಸಲಾಗಿತ್ತು. ಅಷ್ಟೆ ಅಲ್ಲದೆ ತೆಲಂಗಾಣದಲ್ಲಿರುವ ಎರಡು ಬಟ್ಟೆ ಶಾಪ್‌ಗಳನ್ನೂ ಕೂಡ ಸಂದೀಪ್ ಹೆಸರಿಗೆ ಮಾಡಿಕೊಡಲಾಗಿತ್ತು. ಆದರೆ ಸಂದೀಪ್ ಮಾತ್ರ ದುಶ್ಚಟಕ್ಕೆ ಬಿದ್ದಿದ್ದ. ಮನೆಗೆ ಸ್ನೇಹಿತರನ್ನ ಕರೆ ತಂದು ಡ್ರಗ್ ಪಾರ್ಟಿ ಮಾಡಿಸ್ತಿದ್ದ ಇದನ್ನ ವಿರೋಧಿಸಿದರೆ ಗೆಳೆಯರ ಮುಂದೆಯೇ ಹಲ್ಲೆ ನಡೆಸಿ ಅಶ್ಲೀಲವಾಗಿ ನಡೆದುಕೊಳ್ತಿದ್ದ. ಈ ಹಿಂದೆ ಡ್ರಗ್ ನಶೆಯಲ್ಲಿ ಪತ್ನಿಯ ತಲೆ ಮೇಲೆ ಮೂತ್ರವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದ. ಜೊತೆಗೆ ವರದಕ್ಷಿಣೆ ಕಿರುಕುಳ ಕೊಟ್ಟಿದ್ದಾರೆಂದು ನೊಂದ ಪತ್ನಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
PublicNext
10/08/2022 12:44 pm