ಬೆಂಗಳೂರು: 50 ಲಕ್ಷ ಮೌಲ್ಯದ ಒಡವೆ,ಚಿನ್ನ ಕದ್ದು ಕದೀಮರು ಪರಾರಿ!
ಆನೇಕಲ್:50 ಲಕ್ಷ ಮೌಲ್ಯದ ಒಡವೆ,ಚಿನ್ನವನ್ನು ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಮರೇಶ್ ರೆಡ್ಡಿ ಎಂಬವರ ಮನೆಯಲ್ಲಿ ಮನೆ ಬೀಗ ಮುರಿದು ಕದೀಮರು ಕಳ್ಳತನ ಎಸಗಿದ್ದಾರೆ.
ಇದೇ ತಿಂಗಳ 6 ನೇ ತಾರೀಖಿನಂದು ಅಮರೇಶ್ ರೆಡ್ಡಿ ಮತ್ತು ಕುಟುಂಬದ ಸದಸ್ಯರೆಲ್ಲ ಮನೆ ಬೀಗ ಹಾಕಿ ಮದುವೆಗೆ ತೆರಳಿದರಂತೆ. ಅಂದು ಮಧ್ಯರಾತ್ರಿ ಕಳ್ಳರು ಮನೆ ಬೀಗ ಒಡೆದು ಮನೇಯಲ್ಲಿದ್ದ 50 ಲಕ್ಷ ಮೌಲ್ಯದ ಚಿನ್ನ ಒಡವೆ ಕದ್ದು ಪರಾರಿಯಾಗಿದ್ದಾರೆ.
ಇನ್ನು ಮದುವೆ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ಕಳ್ಳತನ ಆಗಿರುವುದು ತಿಳಿದು ಬಂದಿದೆ. ಕೂಡಲೆ ಸೂರ್ಯಸಿಟಿ ಪೊಲೀಸರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಎಸ್‌ಪಿ ಮಲ್ಲಿಕಾರ್ಜುನ ಇನ್ಸ್‌ಪೆಕ್ಟರ್ ರಾಘವೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಮನೆಯಲ್ಲಿ ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.
ಇನ್ನು ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
09/08/2022 04:42 pm