ದೇವನಹಳ್ಳಿ: ಆತ ಏಳು ವರ್ಷಗಳ ಹಿಂದೆ ಹಾಸನ ಮೂಲದ ಯುವತಿ ಜೊತೆ ಮದುವೆಯಾಗಿದ್ದ. ಸಂಸಾರ ನಡೆಸಿಕೊಂಡು ಪತ್ನಿ ಮಗನ ಜೊತೆ ಸುಖಿಯಾಗಿದ್ದ. ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದ ಗಂಡ ಗುರುತು ಸಹ ಸಿಗದ ರೀತಿ ಕಾರು ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಫೋಟೋದಲ್ಲಿ ಕಾಣ್ತಿರೂ ಈತನ ಹೆಸರು ಆರೀಫ್ ಪಾಷ. ಯಲಹಂಕದ ಅಪಾರ್ಟ್ಮೆಂಟ್‌ನಲ್ಲಿ ಪತ್ನಿ, ಮಗನ ಜೊತೆ ವಾಸವಿದ್ದ. ಆರೀಫ್ ಪೈನಾನ್ಸ್ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ. ಅದೇನಾಯ್ತೋ ಏನೋ. ಎಲ್ಲರ ಜೊತೆ ಚನ್ನಾಗಿದ್ದ ಆರೀಫ್‌ನ ಹುಂಡೈ ಕಾರು ನಿನ್ನೆ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಹೆಗ್ಗನಹಳ್ಳಿಯ ಖಾಸಗಿ ಬಡಾವಣೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಲಿ ಪತ್ತೆಯಾಗಿದೆ.
ಜತೆಗೆ ಕಾರಿನಲ್ಲಿ ಬಾಗಶಃ ಸುಟ್ಟ ಕರಕಲಾದ ಮೃತದೇಹ ಪತ್ತೆಯಾಗಿದ್ದು, ಅದು ಇದೇ ಆರೀಫ್ ನ ಮೃತದೇಹ ಎನ್ನಲಾಗ್ತಿದೆ. ಇಂದು ಬೆಳಗ್ಗೆ ಸ್ಥಳಕ್ಕಾಗಮಿಸಿದ ಕುಟುಂಬ & ಸ್ನೇಹಿತರು ಆರೀಫ್‌ನ ದುರಂತ ಅಂತ್ಯ ಕಂಡು ಶಾಖ್ ಆಗಿದ್ದಾರೆ.
ಆರೀಫ್ ಪತ್ನಿ ಕೆಲ ದಿನಗಳಿಂದ ಮನೆ ಬಳಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದಳು. ಅಲ್ಲೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ಲಂತೆ. ಆ ವ್ಯಕ್ತಿನ ಮನೆಗೂ ಕರೆದುಕೊಂಡು ಬಂದಿದ್ದಳಂತೆ. ಈ ಬಗ್ಗೆ ಮಗ ಆರೀಫ್‌ಹೇಳಿದ್ದರಿಂದ ನ್ಯಾಯ ಪಂಚಾಯ್ತಿ ಮಾಡಿ, ಪತ್ನಿನ ತವರಿಗೆ ಕಳಿಸಿದ್ನಂತೆ. ಆರೀಫ್ ತಾಯಿ ಜೊತೆ ನಿನ್ನೆ ಹೊರಗಡೆ ಹೋಗಿ ಬರೋದಾಗಿ ಹೇಳಿ ಬಂದಿದ್ನಂತೆ. ಹೊರಗಡೆ ಬಂದಿದ್ದ ಆರೀಫ್ ಕಾರು ಸಮೇತ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯಾರೂ ಆರೀಫ್ ನ ಕೊಲೆ ಮಾಡಿದ್ದಾರೆ ಎಂಬ ಶಂಕೆ ಕುಟುಂಬದ್ದು. ಇದೇ ಅನುಮಾನದ ಮೇಲೆ ವಿಶ್ವನಾಥಪುರ ಠಾಣೆಯಲ್ಲಿ ಕುಟುಂಬಸ್ಥರು ದೂರು ನೀಡಿದ್ದಾರೆ. ಇದೀಗ ವಿಶ್ವನಾಥಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ದೇವನಹಳ್ಳಿ
Kshetra Samachara
08/08/2022 03:31 pm