ಬೆಂಗಳೂರು: ಬೆಂಗಳೂರು ಸಂಚಾರ ಪೊಲೀಸರು ಎಷ್ಟೇ ವ್ಹೀಲಿಂಗ್ ಕೇಸ್ ಹಾಕಿದ್ರೂ, ವ್ಹೀಲಿಂಗ್ ಮಾತ್ರ ಕಡಿಮೆ ಆಗ್ತಿಲ್ಲ. ಅದ್ರಲ್ಲೂ ವೀಕ್ ಎಂಡ್ ಬಂದ್ರೆ ಈ ವ್ಹೀಲಿಂಗ್ ಪುಂಡರು ವೀಪರೀತ ಹಾವಳಿ ಕೊಡ್ತಾರೆ.
ಸದ್ಯ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಂಗ್ ರಸ್ತೆ ಮತ್ತೆ ನೈಸ್ ರಸ್ತೆಯ ಹೊರ ಭಾಗದಲ್ಲಿ ಈ ಪುಂಡರ ಉಪಟಳ ಹೆಚ್ಚಾಗಿದ್ದು, ವ್ಹೀಲಿಂಗ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗ್ತಿದೆ. ಸುಮಾರು ತಿಂಗಳಿನಿಂದ ಈ ರೀತಿ ವಿಡಿಯೋಗಳನ್ನ ಇನ್ಸ್ಟ್ರಾಗ್ರಾಂಗಳನ್ನ ಹಾಕಿ ಅದಕ್ಕೊಂದು ಹಾಡನ್ನ ಹಾಕಿ ರೀಲ್ಸ್ ಮಾಡಲಾಗ್ತಿದೆ. ಅಂದರೆ ಪ್ರತಿದಿನವೂ ಪುಂಡರು ಇದೇ ರೀತಿಯ ಕೃತ್ಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಆದರೆ ಯಾರೊಬ್ಬರ ಮೇಲೂ ಕೂಡ ಇದುವರೆಗೆ ಕ್ರಮ ಕೈಗೊಂಡಿಲ್ಲ. ಇನ್ನು ಒಂದೇ ಬೈಕ್‌ಗೆ ಬೇರೆ ಬೇರೆ ನಂಬರ್ ಪ್ಲೇಟ್‌ಗಳನ್ನ ಹಾಕಿಕೊಂಡು ಕುಕೃತ್ಯ ಮೆರೆಯುವುತ್ತಿರುವುದರಿಂದ ಪುಂಡರನ್ನ ಪತ್ತೆ ಹಚ್ಚಲು ಪೊಲೀಸರೂ ಹರಸಾಹಸ ಪಡುತ್ತಿದ್ದಾರೆ. ಇನ್ನು ವೀಲಿಂಗ್ ಮಾಡುವ ವಾಹನದ ಹಿಂಬದಿ ಮಡ್ ಗಾರ್ಡ್ ಇರುವುದಿಲ್ಲ. ಇಂತಹ ವಾಹನಗಳನ್ನ ಪತ್ತೆ ಹಚ್ಚಿದರೆ ಪೊಲೀಸರಿಗೆ ವೀಲಿಂಗ್ ಮಾಡುವ ಪುಂಡರು ಸಿಕ್ಕಿಬೀಳ್ತಾರೆ.
PublicNext
07/08/2022 08:21 pm