ನೆಲಮಂಗಲ: ಬೆಂ.ಗ್ರಾ.ಜಿಲ್ಲೆ ನೆಲಮಂಗಲ ತಾಲ್ಲೂಕು ಕಕ್ಕೆಪಾಳ್ಯ ಗ್ರಾಮದಲ್ಲಿನ ಜೂಜು ಅಡ್ಡೆ ಮೇಲೆ ನೆಲಮಂಗಲ ಗ್ರಾಮಾಂತರ ಠಾಣಾ ಸಿಪಿಐ ಎ.ರಾಜೀವ್ ನೇತೃತ್ವದ ತಂಡ ದಾಳಿ ನಡೆಸಿದೆ.
ಇಲ್ಲಿ ಜೂಜಾಟದಲ್ಲಿ ತೊಡಗಿದ್ದ 11 ಮಂದಿ ಜೂಜುಕೋರರನ್ನ ಬಂಧಿಸಿದ್ದು 1,17,200 ನಗದು, 4 ಬೈಕ್‌ಗಳನ್ನ ಜಪ್ತಿ ಮಾಡಿದ್ದಾರೆ.
ಇನ್ನೂ ಗ್ರಾಮದ ಮಂಜುನಾಥ್ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ 11 ಮಂದಿ ಜೂಜಾಡುತ್ತಿದ್ದರು ಎನ್ನಲಾಗಿದೆ.
ಈ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
05/08/2022 09:04 pm