ಬೆಂಗಳೂರು:ಕಳ್ಳತನವನ್ನೆ ವೃತ್ತಿಮಾಡಿಕೊಂಡಿರೋ ಇವರು ಈ ಹಿಂದೆ ಕೂಡ ಸಾಕಷ್ಟು ಬಾರಿ ಜೈಲಿಗೆ ಹೋಗಿ ಬಂದಿದ್ದಾರೆ. ಪ್ರತಿಸಾರಿ ಪೊಲೀಸ್ರಿಗೆ ಲಾಕ್ ಆದಾಗ ಸರ್ ಇನ್ನೊಮ್ಮೆ ಕಳ್ಳತನ ಮಾಡಲ್ಲ ಅಂತ ಅಣೆ ಮಾಡೋ ಇವ್ರು ಜೈಲಿಗೆ ಹೋಗ್ತಿದ್ದಂತೆ ಯಾವ ಏರಿಯಾದಲ್ಲಿ ಕಳ್ಳತನ ಮಾಡಿದ್ರೆ ಸೇಫ್ ಅಂತ ಜೈಲಲ್ಲೆ ಸ್ಕೆಚ್ ಹಾಕ್ತಿದ್ರು.
ಈ ಹಿಂದೆ ಕೇಸ್ ಮಾಡಿದ ಸ್ಟೇಷನ್ ವ್ಯಾಪ್ತಿ ಬಿಟ್ಟು ಬೇರೆ ಸ್ಟೇಷನ್ ಲಿಮಿಟ್ಸ್ ನಲ್ಲಿ ಕಳ್ಳತನಕ್ಕೆ ಮುಂದಾಗ್ತಿದ್ರು. ಹೀಗೆ ಕಳ್ಳತನವನ್ನ ಖಾಯಂ ವೃತ್ತಿ ಮಾಡಿಕೊಂಡಿದ್ದ ಸೈಯದ್ ನದೀಂ ಹಾಗೂ ಅಜಂ ಖಾನ್ ನನ್ನ ಬಾಣಸವಾಡಿ ಪೊಲೀಸ್ರು ಬಂಧಿಸಿದ್ದಾರೆ.
ರಾತ್ರಿ ವೇಳೆ ಮನೆಗೆ ಹಾಕಿದ್ದ ಲಾಕ್ ಮುರಿದು ಕಳವು ಮಾಡ್ತಿದ್ದ ಆರೋಪಿಗಳು, ಈ ಹಿಂದೆಯೂ ಕೃತ್ಯವೆಸಗಿ ಜೈಲಿಗೆ ಹೋಗಿದ್ದರು.ಕೆಜಿ ಹಳ್ಳಿ , ಆರ್ ಟಿ ನಗರ , ಗೋವಿಂದಪುರ ಠಾಣಾವ್ಯಾಪ್ತಿಯಲ್ಲಿ ಕೈ ಚಳಕ ತೋರಿ ಅಂದರ್ ಆಗಿದ್ರು. ಜೈಲಿಗೋದ್ರು ಬುದ್ದಿ ಕಲಿಯದೆ ಜೈಲಿನಿಂದ ಹೊರಬಂದು ಮತ್ತೆ ಮನೆಗೆ ಕನ್ನ ಹಾಕ್ತಿದ್ರು. ಸದ್ಯ ಈ ಪ್ರೊಫೆಷನಲ್ ಕಳ್ಳರನ್ನ
ಬಾಣಸವಾಡಿ ಇನ್ಸ್ ಪೆಕ್ಟರ್ ಸಂತೋಷ್ ಆ್ಯಂಡ್ ಟೀಮ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿ 4 ಲಕ್ಷ ಮೌಲ್ಯದ 92 ಗ್ರಾಂ ಚಿನ್ನಾಭರಣ ಸೀಜ್ ಮಾಡಿದ್ದಾರೆ.
Kshetra Samachara
04/08/2022 02:24 pm