ಆನೇಕಲ್: ಮದ್ಯದ ಮತ್ತಿನಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಅಳಿಬೊಮ್ಮಸಂದ್ರ ಗ್ರಾಮದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಮಾದಮ್ಮ ಕೊಲೆಯಾದ ದುರ್ದೈವಿ. ಮಣಿ ಕೊಲೆ ಮಾಡಿದ ಆರೋಪಿ. ಸದ್ಯ ಪೊಲೀಸ್ ಮಾಹಿತಿ ಪ್ರಕಾರ, ತಮಿಳುನಾಡು ಮೂಲದ ಮಣಿ ಮತ್ತು ಮಾದಮ್ಮ ದಂಪತಿಯು ಚಂದಾಪುರದ ಅಳೆಬೊಮ್ಮಸಂದ್ರ ಗ್ರಾಮದಲ್ಲಿ ವಾಸವಾಗಿದ್ದರಂತೆ. ಗಂಡ ಬಿಟ್ಟ ಮೇಲೆ ಕೊಲೆ ಮಾಡಿದ ಆರೋಪಿ ಮಣಿ ಜೊತೆ ಬಂದು ಜೀವನ ಸಾಗಿಸುತ್ತಿದ್ದರಂತೆ. ಇಂದು ಸಂಜೆ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿರಂತೆ. ಗಲಾಟೆ ವಿಕೋಪಕ್ಕೆ ತಿರುಗಿ ಗಂಡ ಪತ್ನಿ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಸೂರ್ಯ ಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸೂರ್ಯಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
01/08/2022 11:03 pm