ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ನೇಮಕಾತಿ ಆದೇಶದ ಮಾಡಿದ್ದವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ಷಯ್ ಬಾಹುಬಲಿ ಲಕ್ಕಣ್ಣಗೌಡರು ಎಂಬುವರನ್ನು ಉಪ ತಹಶೀಲ್ದಾರ್ ಹುದ್ದೆಗೆ ಆಯ್ಕೆ ಮಾಡಲಾಗಿದೆ ಎಂದು ನಕಲಿ ನೇಮಕಾತಿ ಆದೇಶ ಹೊರಡಿಸಲಾಗಿದೆ. ಉಪ ತಹಶೀಲ್ದಾರ್ ಹುದ್ದೆ ನೇಮಕಾತಿ ಮೂಲಕ ಭಡ್ತಿ ಮಾಡಲು ಸಾಧ್ಯವಿಲ್ಲ. ಇದು ಪೂರ್ಣ ಪ್ರಮಾಣದ ಮುಂಬಡ್ತಿ ಹುದ್ದೆ. ಆದರೆ ಪ್ರಧಾನ ಕಾರ್ಯದರ್ಶಿ ಹೆಸರಿನಲ್ಲಿ ನಕಲಿ ಆದೇಶದ ಪ್ರತಿಯನ್ನ ಕಿಡಿಗೇಡಿಗಳು ಹೊರಡಿಸಿದ್ದು, ಮುಖ್ಯ ಕಾರ್ಯದರ್ಶಿ ಕಚೇರಿಯಿಂದಲೇ ನಕಲಿ ಆದೇಶ ಪ್ರತಿ ಹೊರಡಿಸಲಾಗಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿವೆ.
ನಕಲಿ ಆದೇಶ ಹೊರಡಿಸಿದ್ದ ಹಿನ್ನಲೆ ಕಾನೂನು ಕ್ರಮ ಕೈಗೊಳ್ಳಲು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಸುದರ್ಶನ್ರಿಂದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಅಕ್ಷಯ ಬಾಹುಬಲಿ ಲಕ್ಕನಗೌಡರ್ ಸೇರಿದಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹೆಸರನ್ನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
Kshetra Samachara
01/08/2022 07:56 pm