ಬೆಂಗಳೂರು: ಪತ್ನಿಯ ನಗ್ನ ವೀಡಿಯೋ ಇಟ್ಟುಕೊಂಡು ಪತಿಯೇ ಪತ್ನಿಗೆ ಬ್ಲಾಕ್ ಮೇಲ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮಹಿಳೆಯ ಪತಿಯ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಗರ್ ಅರುಣ್ ಹೆಂಡತಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪತ್ನಿಯ ನಗ್ನ ವೀಡಿಯೋಗಳಿಂದ ಆರೋಪಿ ಪತಿ ಪೋರ್ನ್ ವೆಬ್ಸೈಟ್ ನಡೆಸುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ಮದುವೆ ಬಳಿಕ ಮಹಿಳೆ ಪತಿ ಜೊತೆ ಮುಂಬೈನಲ್ಲಿ ವಾಸವಾಗಿದ್ರು. ಮಹಿಳೆ ಮುಂಬೈನಿಂದ ಬೆಂಗಳೂರಿಗೆ ಬಂದ್ರೂ ಕಿರುಕುಳ ನೀಡೋದನ್ನು ನಿಲ್ಲಿಸಿರಲಿಲ್ಲಾ.
ಕೊನೆಗೆ ಪತಿಯಿಂದ ಬೇಸತ್ತು ದೂರು ದಾಖಲು ಮಾಡಿದ್ದಾರೆ. ಸಾಗರ್ ಜೊತೆ ಆತನ ಗೆಳೆಯ ಸಹ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಸುಲೇಶ್ ಕಾರ್ನಕ್ ಜೊತೆ ಸೇರಿ ಪತ್ನಿಯ ಪೋರ್ನ್ ವೀಡಿಯೋವನ್ನು ಸಾಗರ್ ಮಾಡಿದ್ದನು.
ನಂತರ ಆ ಪೋರ್ನ್ ವೀಡಿಯೋ ಇಟ್ಟುಕೊಂಡು ಐದು ಲಕ್ಷ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಎಂದು ನೊಂದ ಪತ್ನಿ ಆರೋಪಿಸಿ ವೀಡಿಯೋ ಕಿರುಕುಳ ಮತ್ತು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ದಾಖಲಿಕೊಂಡಿರುವ ಬಸವೇಶ್ವರ ಪೊಲೀಸರು ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
Kshetra Samachara
01/08/2022 02:51 pm