ಬೆಂಗಳೂರು: ಸಂಚಾರಿ ದಂಡ ತಪ್ಪಿಸಲು ಒಂದೇ ಬೈಕ್ಗೆ ಎರಡು ನಂಬರ್ ಪ್ಲೇಟ್ ಹಾಕಿ ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿಯನ್ನ ರಾಜಾಜಿನಗರ ಸಂಚಾರಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮರಿಗೌಡ ಬಂಧಿತ ಆರೋಪಿಯಾಗಿದ್ದು, ಮರಿಗೌಡ ತನ್ನ ಬುಲೆಟ್ ಬೈಕಿನ ನಂಬರ್ KA 05 JS 7536ನ ಹಿಂಬದಿ ಪ್ಲೇಟ್ನಲ್ಲಿ 7538 ಎಂಬ ನಂಬರ್ ನಮೂದಿಸಿದ್ದ. ಇದೇ ತಿಂಗಳ 29ರಂದು ನಂದಿನಿ ಲೇಔಟ್ ಠಾಣಾ ವ್ಯಾಪ್ತಿಯ ಕೂಲಿನಗರ ಸೇತುವೆ ಬಳಿ ಕರ್ತವ್ಯದಲ್ಲಿದ್ದ ರಾಜಾಜಿನಗರ ಸಂಚಾರಿ ಠಾಣಾ ಹೆಡ್ ಕಾನ್ಸ್ಟೇಬಲ್ ಸೈಯ್ಯದ್ ನವಾಜ್ ಆರೋಪಿಯನ್ನ ವಶಕ್ಕೆ ಪಡೆದಿದ್ದರು.
ಮರಿಗೌಡ ಬೈಕಿನ ಮುಂದಿನ ನಂಬರ್ ಪ್ಲೇಟ್ ಮೇಲೆ 19,500 ರೂ. ದಂಡವಿದ್ದರೆ, ಹಿಂದಿನ ನಂಬರ್ ಪ್ಲೇಟ್ಗೆ 9,500 ರೂ. ದಂಡ ಬಿದ್ದಿದೆ. ಸದ್ಯ ಆರೋಪಿಯನ್ನ ರಾಜಾಜಿನಗರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದು ಮುಂದಿನ ಕ್ರಮಕ್ಕಾಗಿ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
Kshetra Samachara
30/07/2022 10:54 pm