ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಕೇಸ್‌; ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ

ಬೆಂಗಳೂರು: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೋರ್ಟ್‌ಗೆ ಸಿಐಡಿಯಿಂದ ಇಂದು ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಗಳ ಸಂಬಂಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದೆ‌. 3,065 ಪುಟಗಳ ಚಾರ್ಜ್ ಶೀಟ್‌ನಲ್ಲಿ 30 ಜನ ಆರೋಪಿಗಳ ವಿರುದ್ಧ 202 ವಿಟ್ನೆಸ್‌ಗಳು, 330 ದಾಖಲಾತಿ ಸೇರಿಸಲಾಗಿದೆ. ಎಡಿಜಿಪಿ ಅಮ್ರಿತ್ ಪೌಲ್ ಸೇರಿದಂತೆ ಕೆಲ ಆರೋಪಿಗಳನ್ನು ಬಿಟ್ಟು ಉಳಿದ ಆರೋಪಿಗಳ ಮೇಲೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅಮ್ರಿತ್ ಪೌಲ್ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಲು ಸಾಕಷ್ಟು ಕಾಲವಾಕಾಶ ಇದ್ದು ಹೆಚ್ಚಿನ ಮಾಹಿತಿಯನ್ನ ಸಿಐಡಿ ಕಲೆ ಹಾಕ್ತಿದೆ.

ಸದ್ಯ ಸಂಪೂರ್ಣ ತನಿಖೆ ಮುಗಿದವರ ವಿರುದ್ಧ ಮಾತ್ರ ಈಗ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು, ಎಫ್‌ಐಆರ್ ನಲ್ಲಿ ಹೆಸರು ಇದ್ದು ಅರೆಸ್ಟ್ ಆಗದೆ ಇರುವ ಆರೋಪಿಗಳು ಹಾಗೂ ಕೊನೆ ಹಂತದಲ್ಲಿ ಅರೆಸ್ಟ್ ಆಗಿರುವ ಅರೋಪಿಗಳ ವಿರುದ್ಧ ಚಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿಲ್ಲ.

Edited By : Vijay Kumar
PublicNext

PublicNext

27/07/2022 07:51 pm

Cinque Terre

20.84 K

Cinque Terre

0

ಸಂಬಂಧಿತ ಸುದ್ದಿ