ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮತ್ತೆ ಖಾಕಿ ಬಲೆಗೆ ಬಿದ್ದ ಎಸ್ಕೇಪ್ ಕಾರ್ತಿಕ್

ಬೆಂಗಳೂರು: ಎಸ್ಕೇಪ್ ಕಾರ್ತಿಕ್, ಈ ಹೆಸ್ರು ಬೆಂಗಳೂರು ಪೊಲೀಸ್ರಿಗೆ ಚಿರಪರಿಚಿತ. ನಗರದಲ್ಲಿ ಎಲ್ಲೇ ಮನೆ ಕಳ್ಳತನ ಆದ್ರೂ ಮೊದಲು ಪೊಲೀಸ್ರಿಗೆ ಡೌಟ್ ಬರೋದು ಈ ಎಸ್ಕೇಪ್ ಕಾರ್ತಿ @ ಕಾರ್ತಿಕ್ ಮೇಲೆ. ಯಾಕಂದ್ರೆ ಇಲ್ಲಿಯವರೆಗೂ ಎಂಬತ್ತಕ್ಕೂ ಹೆಚ್ಚು ಪ್ರಕರಣದಲ್ಲಿ ಭಾಗಿಯಾಗಿರುವ ಕಾರ್ತಿ ಸಾಕಷ್ಟು ಬಾರಿ ಜೈಲೂಟ ಮಾಡಿ ವಾಪಸ್ ಬಂದಿದ್ದಾನೆ.

ಎಷ್ಟೇ ಬಾರಿ ಜೈಲಿಗೆ ಹೋದರೂ‌ ಮತ್ತೆ ಜಾಮೀನು ಪಡೆದು ವಾಪಾಸ್ ಬಂದು ಮತ್ತದೆ ಹಾಳಿ ಚಾಳಿ ಮುಂದುವರೆಸೆತ್ತಾನೆ.ಬೀಗ ಹಾಕಿದ ಮನೆಗಳನ್ನ ಗುರುತಿಸಿ ಕೃತ್ಯ ಎಸಗುತ್ತಿದ್ದ ಕಾರ್ತಿ ಈ ಹಿಂದೆ ಜೈಲಿನಲ್ಲಿದ್ದಾಗ ಇಸ್ಕಾನ್ ನ ಅಕ್ಷಯ ಪಾತ್ರ ವಾಹನ ಕೆಳಗೆ ಅವಿತು ಪರಾರಿಯಾಗಿದ್ದ. ಈ ಹಿನ್ನಲೆ ಈತನಿಗೆ ಎಸ್ಕೇಪ್ ಕಾರ್ತಿಕ್ ಎಂಬ ಹೆಸರು ಬಂದಿತ್ತು. ಸದ್ಯ ಈ ಎಸ್ಕೇಪ್ ಕಾರ್ತಿಯನ್ನ ಗೋವಿಂದರಾಜ ನಗರ ಪೊಲೀಸ್ರು ಮನೆಗಳ್ಳತನ ಆರೋಪದಲ್ಲಿ ಬಂಧಿಸಿದ್ದು, 9 ಲಕ್ಷ ಬೆಲೆಬಾಳುವ 157 ಗ್ರಾಂ‌ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

Edited By : PublicNext Desk
Kshetra Samachara

Kshetra Samachara

27/07/2022 06:14 pm

Cinque Terre

1.63 K

Cinque Terre

0

ಸಂಬಂಧಿತ ಸುದ್ದಿ