ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಶ್ಮಿರದಲ್ಲಿ ಉಗ್ರ ತರಬೇತಿಗೆ ಸಜ್ಜಾದ ಬೆಂಗಳೂರಿನ ಶಂಕಿತ ಉಗ್ರ

ಬೆಂಗಳೂರು:ಹೊಟ್ಟೆಪಾಡಿಗೆ ಅಂತ ಅಸ್ಸಾಂ ನಿಂದ ಬೆಂಗಳೂರಿಗೆ ಬಂದು ಉಗ್ರ ಚಟುವಟಿಕೆಯ ವಾಟ್ಸ್ ಆಪ್ ಗ್ರೂಪ್ ಸೇರಿದ್ದ ಅಕ್ತರ್ ಹುಸೈನ್. ಅಕ್ತರ್ ಹುಸೈನ್ ತನಿಖೆ ವೇಳೆ ಸ್ಫೋಟಕ ಸತ್ಯ ಹೊರ ಬಿದ್ದಿದೆ. ಕಳೆದ ಕೆಲ ವರ್ಷದಿಂದ ನಗರದಲ್ಲಿ ನೆಲೆಸಿದ್ದ ಅಕ್ತರ್ ಯೂ ಟ್ಯೂಬ್ ಮತ್ತು ಫೇಸ್ ಬುಕ್ ನಲ್ಲಿ ಜಿಹಾದ್ ಸಂಬಂಧಿಸಿದ ಸ್ಟೋರಿಗಳನ್ನೆ ಹೆಚ್ಚಾಗಿ ನೋಡ್ತಿದ್ದ. ಜಿಹಾದಿ ಸಂಸ್ಕೃತಿಗೆ ಆಕರ್ಶಿತನಾಗಿದ್ದ ಅಕ್ತರ್ ನ ಜಮ್ಮು - ಕಾಶ್ಮಿರದಿಂದ ಉಗ್ರರು ಸಂಪರ್ಕ ಮಾಡಿದ್ರು.

ಟೆಲಿಗ್ರಾಮ್ ಗ್ರೂಪ್ ನಲ್ಲಿ ಅಕ್ತರ್ ನ ಸೇರಿಸಿ ಜಿಹಾದಿ ಬಗೆಗಿನ ಚರ್ಚೆಗಳನ್ನು ನಡೆಸಿದ್ರು. 25-30 ಜನ ಇದ್ದ ಗ್ರೂಪ್ ಗೆ ಸೇರಿದ್ದ ಅಕ್ತರ್ ಕಾಶ್ಮಿರಕ್ಕೆ ತೆರಳಲು ಸಜ್ಜಾಗಿದ್ದ. ಜಿಹಾದಿ ಆಲೋಚನೆ ಇದ್ರೆ ಅಷ್ಟೇ ಸಾಲದು ಇದಕ್ಕೆ ಸೂಕ್ತ ತರಬೇತಿ ಮುಖ್ಯ ಅಂತ ಗ್ರೂಪ್ ಮುಖಂಡ ಅಕ್ತರ್ ಗೆ ಹೇಳಿ ತರಬೇತಿಗಾಗಿ ಪಾಕ್ ಮತ್ತು ಕಾಶ್ಮೀರ ಗಡಿ ಭಾಗದ ಒಂದು ಹಳ್ಳಿಗೆ ಬರುವಂತೆ ಸೂಚಿಸಿದ್ದ. ಇದಕ್ಕೆ ಸಮ್ಮತಿಸಿದ್ದ ಅಕ್ತರ್ ಜಿಹಾದ್ ಟ್ರೈನಿಂಗ್ ಕಾಶ್ಮೀರಕ್ಕೆ ತೆರಳಲು ಸಿದ್ದತೆ ನಡೆಸಿದ್ದ. ಈ ಮಾಹಿತಿಯನ್ನ ಕೇಂದ್ರ ಗುಪ್ತಚರ ಇಲಾಖೆ ಮತ್ತು ಐಬಿ ಕಲೆ ಹಾಕಿತ್ತು.

ಇದೇ ಮಾಹಿತಿ ಮೇರೆಗೆ ಸಿಸಿಬಿ ಜೊತೆ ಕೈಜೋಡಿಸಿ ಶಂಕಿತನ ಹೆಡೆ ಮುರಿಕಟ್ಟಿದ್ದಾರೆ. ಒಂದು ವೇಳೆ ಜಿಹಾದಿ ಟ್ರೈನಿಂಗ್ ಪಡೆದಿದ್ರೆ ಅಕ್ತರ್ ಒಬ್ಬ ತರಬೇತಿಹೊಂದಿದ ಉಗ್ರನಾಗಿ ಜಮ್ಮುವಿನಿಂದ ನಗರಕ್ಕೆ ಹಿಂತಿರುಗುವ ಪ್ಲಾನ್ ನಲ್ಲಿದ್ದ. ಇನ್ನೂ ಕಳೆದ ಒಂದು ವಾರದಿಂದ ಪ್ಲಾನ್ ಮಾಡಿ ಅಕ್ತರ್ ಫಾಲೋ ಮಾಡಿ ಅಕ್ತರ್ ನ‌ ಲಾಕ್ ಮಾಡಿದ್ದಾರೆ.‌ಇನ್ನೂ ಅಕ್ತರ್ ಯಾರ ಯಾರನ್ನ ಈ ಗ್ರೂಪ್ ಗೆ ಸೇರಿಸಿದ್ದ. ಗ್ರೂಪ್ ಯಾರು ಹ್ಯಾಂಡಲ್ ಮಾಡ್ತಿದ್ರು ಎಂದು ಪೊಲೀಸ್ರು ತನಿಖೆ ನಡೆಸ್ತಿದ್ದಾರೆ‌.

Edited By :
PublicNext

PublicNext

26/07/2022 07:51 am

Cinque Terre

8.18 K

Cinque Terre

0

ಸಂಬಂಧಿತ ಸುದ್ದಿ