ಬೆಂಗಳೂರು: ಪೊಲೀಸ್ ಆಯುಕ್ತರ ಕಚೇರಿ ಗೇಟ್‌ನಲ್ಲೇ ವಿಷ ಸೇವಿಸಿ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ವಿಜಯಪುರ ಮೂಲದ ಸಿದ್ದರಾಮಗೌಡ ಎಂಬಾತನಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಅಮೃತಹಳ್ಳಿ ಪೊಲೀಸರು ನಮಗೆ ನ್ಯಾಯ ನೀಡಿಲ್ಲ. ಮಗಳ ವರದಕ್ಷಿಣೆ ಪ್ರಕರಣ ಒಂದರಲ್ಲಿ ಅನ್ಯಾಯವಾಗಿದೆ. ಪೊಲೀಸರು ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿದ್ದಾರೆ ಎಂದು ಸಿದ್ದರಾಮಗೌಡ ಆರೋಪಿಸಿದ್ದಾರೆ.
ಕಮಿಷನರ್ ಕಚೇರಿ ಹಿಂಬದಿ ಗೇಟ್ ಬಳಿ ವಿಷ ಸೇವಿಸಿ ನಿತ್ರಾಣಗೊಂಡು ಬಿದ್ದಿದ್ದ ಸಿದ್ದರಾಮಗೌಡ ಅವರನ್ನು ಕೂಡಲೇ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
PublicNext
25/07/2022 05:53 pm