ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಎಸ್.ಟಿ.ಪಿ ಪ್ಲಾಂಟ್‌ನಲ್ಲಿ ಬಿದ್ದು ವಿದ್ಯಾರ್ಥಿ ಸಾವು: ಮತ್ತೋರ್ವ ವಿದ್ಯಾರ್ಥಿ ಬಚಾವ್!

ಬೆಂಗಳೂರು ದಕ್ಷಿಣ: ಆನೇಕಲ್ : ಸ್ನೇಹಿತರೊಡನೆ ಈಜಲು ಹೋಗಿದ್ದ ವೇಳೆ ಈಜು ಬಾರದೆ ಕಾಲೇಜಿನ ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸೂರ್ಯಸಿಟಿ ಎರಡನೇ ಹಂತಕ್ಕೆ ಹೊಂದಿಕೊಂಡಿರುವ ದ್ವಾರಕನಾಥ್ ಲೇಔಟ್ ನ‌ STP ಪ್ಲ್ಯಾಂಟ್ ಬಳಿ ನಡೆದಿದೆ. ಮತ್ತೋರ್ವ ವಿದ್ಯಾರ್ಥಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವರುಣ್ ಕುಮಾರ್ (18 ವರ್ಷ) ಮೃತಪಟ್ಟ ದುರ್ದೈವಿ

ಹೌದು ವರುಣ್ ಹಾಗೂ ಆತನ ಸ್ನೇಹಿತ ತೆರೆದ ಸ್ಥಿತಿಯಲ್ಲಿದ್ದ ಪ್ಲ್ಯಾಂಟ್ ನಲ್ಲಿ ಈಜು ಕೊಳವೆಂದು ಬಾವಿಸಿ ಈಜಲು ಹೋಗಿದ್ದರು. ಆದರೆ ವರುಣ್ ಗೆ ಈಜು ಬಾರದೆ ಸಾವನ್ನಪ್ಪಿದ್ದಾನೆ.ಇನ್ನು ವರುಣ್ ಆನೇಕಲ್ ನ‌ ಅಕ್ಷರ ಫೌಂಡೇಶನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಎಂದು ತಿಳಿದು ಬಂದಿದೆ .

ಘಟನೆಗೆ ದ್ವಾರಕನಾಥ ಲೇಔಟ್ ತೆರೆದ ಸ್ಥಿತಿಯಲ್ಲಿದ್ದದ್ದೇ ಸಾವಿಗೆ ಕಾರಣವಾಯಿತು ಎಂದು ಬಡಾವಣೆ ವಿರುದ್ಧ ಸ್ಥಳೀಯರು ತಿರುಗಿಬಿದ್ದಿದ್ದರು. ಘಟನಾ ಸ್ಥಳಕ್ಕೆ ಸೂರ್ಯಸಿಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಸೂರ್ಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : PublicNext Desk
Kshetra Samachara

Kshetra Samachara

24/07/2022 09:09 pm

Cinque Terre

2.53 K

Cinque Terre

0

ಸಂಬಂಧಿತ ಸುದ್ದಿ