ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಕುಡಿದ ಮತ್ತಲ್ಲಿ ಟಿಟಿ ಚಾಲಕನ ಅವಾಂತರ

ಬೆಂಗಳೂರು: ಕುಡಿದ ಮತ್ತಿನಲ್ಲಿ ಟಿಟಿ ವಾಹನ ಚಲಾಯಿಸಿ ಚಾಲಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ. ಎಣ್ಣೆ ಮತ್ತಲ್ಲಿ ನಿಯಂತ್ರಣ ಸಿಗದೆ ಏರಿದಲ್ಲಿದ್ದ ಬೈಕ್ ಗಳು ಮತ್ತು ಕಾರಿಗೆ ಡಿಕ್ಕಿ ಹೊಡೆದು ಎಡವಟ್ಟು ಮಾಡಿದ್ದಾನೆ.

ಹೌದು ಯಶವಂತಪುರದ ಮತ್ತಿಕೆರೆಯ ಬಾಂಬೆ ಡೈಯಿಂಗ್ ರೋಡ್ ನಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಐದಕ್ಕೂ ಹೆಚ್ಚು ಬೈಕ್ ಗಳು, ಎರಡು ಕಾರು ಡ್ಯಾಮೇಜ್ ಆಗಿವೆ. ಸದ್ಯ ಸ್ಥಳೀಯರು ಟಿಟಿ ಚಾಲಕನನ್ನು ಹಿಡಿದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಘಟನೆ ಬಗ್ಗೆ ಸ್ಥಳೀಯರು ಯಶವಂತಪುರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nagesh Gaonkar
PublicNext

PublicNext

23/07/2022 08:43 am

Cinque Terre

34.05 K

Cinque Terre

0

ಸಂಬಂಧಿತ ಸುದ್ದಿ