ಬೆಂಗಳೂರು : ಸ್ವಿಗ್ಗಿ ಡೆಲಿವರಿ ಬಾಯ್ ಗ್ರಾಹಕನ ಮೇಲೆ ಅನುಚಿತ ವರ್ತನೆ ನಡೆಸಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.
ಹತ್ತು ರೂಪಾಯಿಗಾಗಿ ಸ್ವಿಗ್ಗಿ ಡೆಲಿವರಿ ಬಾಯ್ ಗ್ರಾಹಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜಯನಗರದ ನಿವಾಸಿಯಾದ ಶಿಖರ್ ಗುಪ್ತ ಅವರು ಸ್ವಿಗ್ಗಿ ಆ್ಯಪ್ ಮೂಲಕ ಊಟ ಆಡರ್ ಮಾಡಿರುತ್ತಾರೆ ಪಾರ್ಸಲ್ ಡಿಲೆವರಿ ಮಾಡುವಾಗ ಸ್ವಿಗ್ಗಿ ಡೆಲಿವರಿ ಬಾಯ್ ಶಿಖರ್ ಗುಪ್ತ ಗೆ ಹತ್ತು ರೂಪಾಯಿ ಎಕ್ಸ್ಟ್ರಾ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ.
ಹಣ ಕೊಡಲು ನಿರಾಕರಿಸಿದ ಶಿಖರ್ ಗುಪ್ತಗೆ ಡೆಲಿವರಿ ಬಾಯ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ವಿಗ್ಗಿ ಡೆಲಿವರಿ ಬಾಯ್ ಬಾಗಿಲು ತಲಾಡಿ ದೌರ್ಜನ್ಯ ನಡೆಸಿದ್ದಾನೆ.
ಸದ್ಯ ಶಿಕರ್ ಗುಪ್ತ ಸ್ವಿಗ್ಗಿ ಡೆಲಿವರಿ ಬಾಯ್ ವರ್ತನೆಯ ವಿಡಿಯೋ ಮಾಡಿಕೊಂಡು ಟ್ವಿಟರ್ ಮೂಲಕ ಪೊಲೀಸ್ ಕಮಿಷನರ್ ಗೆ ದೂರು ನೀಡಿದ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
22/07/2022 02:15 pm