ಬೆಂಗಳೂರು : ಕೇವಲ 3 ಸಾವಿರ ರೂ. ಸಂಬಳ ಕೇಳಿದ್ದಕ್ಕೆ ಸ್ಪಾ ಮಾಲೀಕನೊಬ್ಬ ಮಹಿಳೆಯೋರ್ವಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ ಘಟನೆ ಕನಕಪುರ ರಸ್ತೆಯ ಸಾರಕ್ಕಿ ಸಿಗ್ನಲ್ ಬಳಿ ಇರುವ ಖಾಸಗಿ ಏಡಿ ಸ್ಪಾ ನಲ್ಲಿ ನಡೆದಿದೆ.
ಹೌದು ಈ ಸ್ಪಾ ಮಾಲೀಕ ಮಹಿಳೆಗೆ ತಳಿಸಿ ಕಾಲಿನಿಂದ ಒದ್ದು ತನ್ನ ಪೌರುಷ ತೋರಿಸಿರುವ ವಿಡಿಯೋ ವೈರಲ್ ಆಗಿದೆ. ಇನ್ನು ಈ ಸ್ಪಾನಲ್ಲಿ ಸ್ವಚ್ಛತೆ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಸಂಬಳ ಕೇಳಿದಕ್ಕೆ ಕೆಂಡಾಮಂಡಲರಾದ ಮಾಲೀಕ ಮಹಿಳೆ ಮೇಲೆ ದೌರ್ಜನ್ಯ ಎಸಗಿದ್ದಾನೆ.
ವಿಪರ್ಯಾಸವೆಂದರೆ ಘಟನೆ ನಡೆಯುವ ವೇಳೆ ಸ್ಥಳದಲ್ಲಿದ್ದ ಜನ ನೆರವಿಗೆ ಬಾರದೆ ಘಟನೆಯನ್ನು ನಿಂತು ನೋಡಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
22/07/2022 10:51 am