ಬೆಂಗಳೂರು: ನಡು ರಸ್ತೆಯಲ್ಲಿ ಪುಂಡರು ಬಡಿದಾಡಿಕೊಂಡು ಪುಂಡಾಟತೋರಿದ್ದಾರೆ. ಕೋರಮಂಗಲದಲ 2ನೇ ಬ್ಲಾಕ್ ನಲ್ಲಿ ತಡರಾತ್ರಿ ನಡು ರಸ್ತೆಯಲ್ಲಿ ಪುಂಡರ ಬಡಿದಾಡಿಕೊಂಡಿದ್ದಾರೆ.
ಹತ್ತಾರು ಪುಂಡರು ಮೊದಲು ಒಟ್ಟಿಗೆ ಬಂದು ಏಕಾಏಕಿ ಕಾಳಗಕ್ಕಿಳಿದಿದ್ದಾರೆ. ಕುಡಿದ ಅಮಲಿನಲ್ಲಿ ಪುಂಡರು ಹೊಡೆದಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಎರಡು ಗುಂಪುಗಳ ನಡುವಿನ ವೈಯ್ಯಕ್ತಿಕ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗ್ತಿದೆ.
ಈ ಬಗ್ಗೆ ವೀಡಿಯೋ ಮಾಡಿ ಪೊಲೀಸರಿಗೂ ಸ್ಥಳೀಯರು ಮಾಹಿತಿ ನೀಡಿದ್ದು ಕೋರಮಂಗಲ ಪೊಲೀಸ್ರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.
Kshetra Samachara
21/07/2022 10:46 pm