ಬೆಂಗಳೂರು: ಸಿಟಿ ಜನ ನಾಟಿ ಕೋಳಿ ಮೊಟ್ಟೆಗೆ ಹೆಚ್ಚು ಆಕರ್ಷಿತರಾಗುತ್ತಾರೆ. ಇದನ್ನ ಬಂಡವಾಳ ಮಾಡಿಕೊಂಡ ಕೆಲವು ದಂಧೆಕೋರರು ಜನರನ್ನ ಹೇಗೆಲ್ಲ ಯಮಾರಿಸ್ತಾರೆ ಅನ್ನೋದನ್ನನೋಡಿ.
ಫಾರ್ಮ್ ಕೋಳಿ ಮೊಟ್ಟೆಯನ್ನು ಟೀ ಡಿಕಾಷನ್‌ನಲ್ಲಿ ಅದ್ದಿ ಕಲರ್ ಚೇಂಜ್ ಮಾಡಿ ನಾಟಿ ಮೊಟ್ಟೆ ಅಂತಾ ಮಾರಾಟ ಮಾಡುತ್ತಿರುವ ದಂಧೆ ಬಯಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕುವೆಂಪು ಕಾಲೇಜಿನ ಹಿಂಭಾಗ ಈ ದಂಧೆಯನ್ನು ನಡೆಸಲಾಗುತ್ತಿದೆ. ಕಳೆದ ಎರಡ್ಮೂರು ವರ್ಷಗಳಿಂದ ಕರಿಯಪ್ಪ ಎಂಬಾತ ಈ ನಕಲಿ ಮೊಟ್ಟೆ ದಂಧೆ ನಡೆಸುತ್ತಿದ್ದಾನೆ. ಕೋಳಿ ಫಾರ್ಮ್‌ನಿಂದ ಸ್ವಲ್ಪ ಸಣ್ಣ ಗಾತ್ರದ ಮೊಟ್ಟೆ ತಂದು ಟೀ ಡಿಕಾಷನ್‌ನಲ್ಲಿ ಅದ್ದಲಾಗುತ್ತೆ. ಇದ್ರಿಂದ ಕೆಲ ಗಂಟೆಗಳ ನಂತರ ಫಾರಮ್ ಕೋಳಿಯ ಮೊಟ್ಟೆಯ ಬಣ್ಣ ನಾಟಿ ಕೋಳಿ ಮೊಟ್ಟೆಯ ಬಣ್ಣದಂತೆ ಬದಲಾಗಿರುತ್ತೆ.
ಆರೋಪಿಗಳು ಈ ನಕಲಿ ನಾಟಿ ಮೊಟ್ಟೆಯನ್ನು ರಸ್ತೆ ಬದಿ ಹಾಗೂ ನಗರದ ಪ್ರತಿಷ್ಟಿತ ನಗರಗಳಲ್ಲಿ ನಾಟಿ ಮೊಟ್ಟೆ ಅಂತ ಮಾರಾಟ ಮಾಡುತ್ತಿದ್ದಾರೆ. ಜನರ ನಂಬಿಕೆ ಮತ್ತು ವಿಶ್ವಾಸವನ್ನೆ ಬಂಡವಾಳ ಮಾಡಿಕೊಂಡು ಫಾರಮ್ ಕೊಳಿ ಮೊಟ್ಟೆಗೆ ಬಣ್ಣ ಕಟ್ಟಿ ಮಾರಾಟ ಮಾಡೋ ಈ ಬಣ್ಣದ ಜನರ ಬಗ್ಗೆ ಜನ ಎಚ್ಚರ ವಹಿಸಬೇಕಾಗಿದೆ.
PublicNext
20/07/2022 09:54 pm