ಬೆಂಗಳೂರು: ಒಂದೇ ದಿನ ಮೂರು ಕೊಲೆ ಯತ್ನ, ದರೋಡೆ , ಸುಲಿಗೆ ಮಾಡಿದ್ದ ಆರೋಪಿಗಳನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ ಒಂಟಿಯಾಗಿ ಬರುವರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತಿದ್ದ ಆರೋಪಿಗಳಾದ ವಿನಯ್ ಕುಮಾರ್, @ ಮಿಂಡ ಚಂದ್ರಕುಮಾರ್,ದಿನೇಶ್,ಮತ್ತು ದರ್ಶನ್ ಬಂಧಿತರಾಗಿದ್ದಾರೆ. ನಂದಿನಿ ಲೇಔಟ್ ನಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಮೊಬೈಲ್ ದೋಚಿದ್ದ ಆರೋಪಿಗಳು.
ಅದೇ ದಿನ ಮಹಾಲಕ್ಷ್ಮಿ ಲೇಔಟ್ ತಮ್ಮ ದುಶ್ಮನ್ ಗುಂಡ ಅಲಿಯಾಸ್ ಗಿರೀಶ್ ಕೊಲೆಗೆ ಆರೋಪಿಗಳು ಯತ್ನಿಸಿದ್ರು.ಗುಂಡ ಮನೆಯಲ್ಲಿಸಿಗದ ಹಿನ್ನಲೆ ಮನೆಯ ಕಿಟಕಿ ಮತ್ತು ಗಾಜುಗಳನ್ನು ಪುಡಿಪುಡಿ ಮಾಡಿದ್ರು.ಮತ್ತೆ ಅಲ್ಲಿಂದ ತಾವು ಜೈಲಿನಲ್ಲಿ ಇದ್ದಾಗ ಜಾಮೀನು ಕೊಡಿಸಲು ಸಹಾಯ ಮಾಡಲಿಲ್ಲ ಎಂದು ಸೀರೆ ಅಂಗಡಿ ಮಾಲೀಕನ ಸುಲಿಗೆಗೆ ಮಾಡಿ 10 ಸಾವಿರ ಬೆಲೆ ಬಾಳುವ ಸೀರೆಗಳನ್ನು ಸುಲಿಗೆ ಮಾಡಿದ್ರು. ಜುಲೈ 12 ರಂದು ಮೂರು ಕೃತ್ಯಗಳನ್ನು ಮಾಡಿದ ಆರೋಪಿಗಳು.ಮಾರಾಕಸ್ತ್ರಾಗಳನ್ನು ಹಿಡಿದು ದರೋಡೆ ಸಂಚು ರೂಪಿಸುತಿದ್ದ ವೇಳೆ ಸಿಸಿಬಿ ಬಲೆಗೆ ಬಿದ್ದಿದ್ದಾರೆ.
Kshetra Samachara
20/07/2022 02:46 pm