ಬೆಂಗಳೂರು: ಐ ಫೋನ್, ಒನ್ ಪ್ಲಸ್, ಸ್ಯಾಮ್ ಸಂಗ್ ವಿವೋ,ಒಪ್ಪೋ ಹೀಗೆ ಬ್ರಾಂಡೆಂಡ್ ಮೊಬೈಲ್ ಫೋನ್ ಗೆ ಪೌಚು, ಕವರ್, ಗಾಡ್ ಇಯರ್ ಫೋನ್ ಕೂಡ ಅದೇ ಬ್ರಾಂಡ್ ಬೇಕು ಅಂತ ಎಸ್ ಜೆ ಪಾರ್ಕ್ ಕಡೆ ಹೋಗೋ ಮುನ್ನ ಸ್ವಲ್ಪ ಜಾಗ್ರತೆ. ಯಾಕಂದ್ರೆ ಹೈಫೈ ಕಂಪನಿ ಹೆಸ್ರಲ್ಲಿ ಲೋಕಲ್ ಐಟಮ್ ಗಳನ್ನ ಕೊಟ್ಟು ಯಾಮಾರಿಸ್ತಾರೆ.
ಸದ್ಯ ಸಿಸಿಬಿ ಪೊಲೀಸ್ರು ಇಂಥಹದೊಂದು ಜಾಲವನ್ನ ಪತ್ತೆ ಮಾಡಿದ್ದು, ಪ್ರತಿಷ್ಠಿತ ಮೊಬೈಲ್ ಕಂಪೆನಿಗಳ ನಕಲಿ ಬಿಡಿಭಾಗ ಮಾರಾಟ ಮಾಡ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ. ಬರೋಬ್ಬರಿ 5 ಕಡೆ ದಾಳಿ ನಡೆಸಿರೋ ಸಿಸಿಬಿ ಅಧಿಕಾರಿಗಳು ಐಫೋನ್ ಮೊಬೈಲ್ ಕಂಪೆನಿಯ ಬಿಡಿಭಾಗ ಮಾರಾಟ ಮಾಡ್ತಿದ್ದ ಅಂಗಡಿಯ ಮೇಲೆ ದಾಳಿ ನಡೆಸಿದ್ದಾರೆ.
ಎಸ್ ಜೆ ಪಾರ್ಕ್ ಹಾಗೂ ಹಲಸೂರು ಗೇಟ್ ಠಾಣಾ ವ್ಯಾಪ್ತಿಯಲ್ಲಿ ದಾಳಿಮಾಡಿದ್ದು, ದಾಳಿ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಮೊಬೈಲ್ ಫೋನ್ ನ ಬಿಡಿಭಾಗ ವಶಕ್ಕೆ ಪಡೆಯಲಾಗಿದ್ದು, ಅಂಗಡಿಯ ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
PublicNext
20/07/2022 02:29 pm