ಬೆಂಗಳೂರು: ಪತ್ನಿ ಹಿಂದೆ ಬಿದ್ದಿದ್ದ ಪಾಗಲ್ ಪ್ರೇಮಿಯನ್ನು ಕೊಂದ ಆರೋಪದಡಿ ಶಿವಾಜಿನಗರ ಪೊಲೀಸರು ಜಿಷಾನ್ ಎಂಬಾತನನ್ನು ಬಂಧಿಸಿದ್ದಾರೆ.
ಪಾಗಲ್ ಪ್ರೇಮಿ ಜಾವೆದ್ ತನ್ನ ಹಳೇ ಲವರ್‌ಗೆ ಮದುವೆಯಾಗಿದ್ದರೂ ಪ್ರೀತಿಸುವಂತೆ ಹಿಂದೆ ಬಿದ್ದಿದ್ದ. ಈ ಹಿನ್ನೆಲೆ ಆರೋಪಿ ಜಿಷಾನ್, ನನ್ನ ಹೆಂಡತಿಯ ಸಹವಾಸಕ್ಕೆ ಬರಬೇಡ ಅಂತ ವಾರ್ನ್ ಮಾಡಿದ್ದ. ಆದರೆ ಇತ್ತ ತನ್ನ ಅದೇ ಚಾಳಿ ಮುಂದುವರೆಸಿದ್ದ ಜಾವೆದ್ ಜುಲೈ 15ರಂದು ತಡರಾತ್ರಿ ಜಿಷಾನ್ ಮನೆ ಬಳಿ ಹೋಗಿ ಮತ್ತೆ ಗಲಾಟೆ ಮಾಡಿದ್ದ. ಮತ್ತು ಮಾಜಿ ಪ್ರೇಯಸಿಗೆ ನನ್ನ ಲವ್ ಮಾಡೇ.. ಲವ್ ಮಾಡೇ ಅಂತ ದುಂಬಾಲು ಬಿದ್ದಿದ್ದ. ಈ ಗಲಾಟೆ ಅತಿರೇಕಕ್ಕೆ ಹೋಗಿ ಜಿಷಾನ್, ಲವರ್ ಬಾಯ್ ಜಾವೆದ್‌ನ ಕುತ್ತಿಗೆ ಭಾಗಕ್ಕೆ ಕತ್ತರಿಯಿಂದ ಇರಿದಿದ್ದ. ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಸ್ಪತ್ರೆಗೆ ತೆರಳಿದ ಜಾವೇದ್ ಪ್ರಾಣ ಉಳಿಸಿ ಸರ್ ಅಂತ ವೈದ್ಯರನ್ನು ಬೇಡಿಕೊಂಡಿದ್ದ. ಆದರೆ ಚಿಕಿತ್ಸೆ ನೀಡುವ ವೇಳೆಗೆ ಜಾವದ್ ಮೃತಪಟ್ಟಿದ್ದ.
ಇತ್ತ ಕೊಲೆ ಆರೋಪಿ ಜಿಷಾನ್ ನಾನೇನೂ ಮಾಡೇ ಇಲ್ಲ. ನನಗೇನೂ ಗೊತ್ತೇ ಇಲ್ಲ ಎಂಬಂತೆ ಸುಮ್ಮನಾಗಿಬಿಟ್ಟಿದ್ದ. ಇದನ್ನೇ ಪೊಲೀಸರ ಬಳಿ ಹೇಳಿಕೊಂಡಿದ್ದ. ಕೊನೆಗೆ ಪೊಲೀಸರು ಠಾಣೆಗೆ ಇನ್ವೈಟ್ ಮಾಡಿ ಸ್ಪೆಷಲ್ ಟ್ರೀಟ್‌ಮೆಂಟ್ ಕೊಟ್ಟಮೇಲೆ ಹೌದು ಸಾರ್ ನಾನೇ ಕತ್ತರಿಯಿಂದ ಇರಿದಿದ್ದು ಅಂತ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಮಾಜಿ ಪ್ರಿಯತಮೆಯ ಹಿಂದೆ ಬಿದ್ದಿದ್ದ ಜಾವೇದ್ ಕೈಲಾಗದೇ ಕೈಲಾಸ ಕಂಡ್ರೆ ಇತ್ತ ಕೊಲೆ ಆರೋಪಿ ಜಿಷಾನ್ ಎಲ್ಲವೂ ಕೈಯಲ್ಲಿದ್ದರೂ ಜೈಲು ಪಾಲಾಗಿದ್ದಾನೆ.
PublicNext
19/07/2022 07:10 pm